December 7, 2023
ಕೋವಿಡ್-19 (Covid 19) ಸಾಂಕ್ರಾಮಿಕ ರೋಗವು ಜನರನ್ನು ಮತ್ತೆ ತಮ್ಮ ಆರೋಗ್ಯ ಮತ್ತು ಯೋಗಕ್ಷೇಮದ ಕಡೆಗೆ ಒಮ್ಮೆ ತಿರುಗಿ ನೋಡುವಂತೆ ಮಾಡಿದ್ದಂತು ನಿಜ. ಈ ಕೋವಿಡ್ ಹಾವಳಿ ಶುರುವಾಗುವ ಮುಂಚೆ ಜನರು ತಮ್ಮ ಕೆಲಸಗಳಲ್ಲಿ ಎಷ್ಟೊಂದು ಬ್ಯುಸಿಯಾಗಿದ್ದರು ಎಂದರೆ ಅವರಿಗೆ ಇಡೀ ದಿನದಲ್ಲಿ ಅರ್ಧ ಗಂಟೆ ವಾಕ್ (Walk) ಮಾಡುವುದಕ್ಕೂ ಸಮಯ ಸಿಗುತ್ತಿರಲಿಲ್ಲ ಎಂದು ಹೇಳಬಹುದು. ಆದರೆ ಕೋವಿಡ್ ಬಂದಾಗಿನಿಂದ ಜನರು ಆಫೀಸಿಗೆ ಹೋಗಿ ಬರುವ ಸಮಯ ಉಳಿಯಿತು ಮತ್ತು ಮನೆಯಲ್ಲಿಯೇ ಕುಳಿತು ಕೆಲಸ ಮಾಡುವ ಹಾಗೆ ಆಯಿತು. ಕುಟುಂಬದವರೊಡನೆ ಬೆರೆಯಲು ಸ್ವಲ್ಪ ಸಮಯ ಸಿಕ್ಕಿತು ಮತ್ತು ತಮ್ಮ ಆರೋಗ್ಯ ಮತ್ತು ಫಿಟ್ನೆಸ್ (Fitness) ಬಗ್ಗೆ ಸ್ವಲ್ಪ ಕಾಳಜಿ ವಹಿಸಲು ಸಹ ಸಮಯ ಸಿಕ್ಕಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗಂತೂ ದೇಹದಲ್ಲಿನ ಅತಿಯಾದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಅನೇಕ ರೀತಿಯ ವ್ಯಾಯಾಮಗಳು ಮತ್ತು ಫಿಟ್ನೆಸ್ ತರಬೇತಿ ಕೇಂದ್ರಗಳು ಹುಟ್ಟಿಕೊಂಡಿವೆ ಎಂದು ಹೇಳಬಹುದು.

ಜಿಮ್, ಜುಂಬಾ, ಪಿಲೇಟ್ಸ್‌ನಿಂದ ಹಿಡಿದು ಕ್ರೀಡೆಗಳವರೆಗೆ, ಆಯ್ಕೆಗಳು ಅನೇಕವಾಗಿವೆ. ಆದರೂ, ಹೆಚ್ಚಿನ ಜನರು ದೂರ, ಸಮಯದ ನಿರ್ಬಂಧಗಳು ಅಥವಾ ತಾಲೀಮು ನಿರ್ದಿಷ್ಟ ಬಟ್ಟೆಗಳು ಮತ್ತು ಪರಿಕರಗಳಲ್ಲಿ ಹಣ ಹೂಡಿಕೆಯಿಂದಾಗಿ ಅಂತಹ ಚಟುವಟಿಕೆಗಳಲ್ಲಿ ಭಾಗವಹಿಸಲು ಹಿಂಜರಿಯುತ್ತಾರೆ.

ತಜ್ಞರ ಪ್ರಕಾರ, ಚುರುಕಾದ ನಡಿಗೆಯು ಕಾರ್ಡಿಯೋದ ಅತ್ಯಂತ ಪರಿಣಾಮಕಾರಿ ರೂಪಗಳಲ್ಲಿ ಒಂದಾಗಿದೆ. ಈ ಅಭ್ಯಾಸದ ಉತ್ತಮ ಭಾಗವೆಂದರೆ ಯಾವುದೇ ಹಣದ ಹೂಡಿಕೆ ಇಲ್ಲ. ನಿಮಗೆ ಬೇಕಾಗಿರುವುದು ಆರಾಮದಾಯಕ ಜೋಡಿ ಬೂಟುಗಳು ಅಷ್ಟೇ ಎಂದು ಹೇಳಬಹುದು. ನೀವು ದಿನವಿಡೀ ಮಾಡುವ ನಡಿಗೆಗಿಂತ ಇದು ಹೇಗೆ ಭಿನ್ನವಾಗಿದೆ ಎಂದು ನೀವು ಕೇಳಬಹುದು.

ಇದನ್ನೂ ಓದಿ: Weight loss: ತೂಕ ಇಳಿಸಲು ಇಲ್ಲಿದೆ ಸಿಂಪಲ್ ಟ್ರಿಕ್ಸ್; ಈ 2 ಪದಾರ್ಥ ಸಾಕು ನಿಮ್ಮ ಬೊಜ್ಜು ಕರಗಿಸಲು

ಚುರುಕಾದ ನಡಿಗೆ:

ಚುರುಕಾದ ನಡಿಗೆ ಎಂದರೆ ವೇಗವಾಗಿ ನಡೆಯುವುದು ಎಂದರ್ಥ ಮತ್ತು ಹೀಗೆ ನಡೆಯುವುದರಿಂದ ನಮ್ಮ ದೇಹದಿಂದ ಸಾಕಷ್ಟು ಬೆವರು ಬರಬೇಕು. ನೀವು ಇದನ್ನು ಒಂದು ಆಟದ ಮೈದಾನದಲ್ಲಿ ಮತ್ತು ಮನೆಯ ಹೊರಗೆ ಇರುವ ಜಾಗದಲ್ಲಿ ಮಾಡಿದರೂ ನಡೆಯುತ್ತೆ, ಆದರೆ ನಡಿಗೆಯ ವೇಗವನ್ನು ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ.

ನೀವು ಮಾಡುತ್ತಿರುವುದು ನಿಜಕ್ಕೂ ಚುರುಕಾದ ನಡಿಗೆಯೇ ಅಥವಾ ಬೇರೆ ರೀತಿಯ ನಡಿಗೆ ಆಗುತ್ತಿದೆಯೇ ಎಂದು ತಿಳಿದುಕೊಳ್ಳಲು ನೀವು ನಿಮ್ಮ ಹೆಜ್ಜೆಗಳನ್ನು ಎಣಿಸುವುದು ಸೂಕ್ತ. ಸಂಶೋಧನೆಯ ಪ್ರಕಾರ, ನಿಮಿಷಕ್ಕೆ ಕನಿಷ್ಠ 100 ಹೆಜ್ಜೆಗಳನ್ನು ನಡೆಯುವುದರಿಂದ ಈ ವ್ಯಾಯಾಮವು ನೀಡುವ ಎಲ್ಲಾ ಪ್ರಯೋಜನಗಳನ್ನು ನೀವು ಪಡೆಯುತ್ತೀರಿ ಎಂದು ಹೇಳಲಾಗುತ್ತದೆ. ಇದನ್ನು ಲೆಕ್ಕ ಇಡುವುದು ಹೇಗೆ? ನಿಮ್ಮ ಹೆಜ್ಜೆಗಳ ಮೇಲೆ ನಿಗಾ ಇಡಲು ನಿಮಗೆ ಸಹಾಯ ಮಾಡುವ ಯಾವುದೇ ಫಿಟ್ನೆಸ್ ಅಪ್ಲಿಕೇಶನ್ ಅನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

ಚುರುಕಾದ ನಡಿಗೆಯಲ್ಲಿ ನೀವು ಹೆಚ್ಚು ಕ್ಯಾಲೋರಿಗಳನ್ನು ಬರ್ನ್ ಮಾಡಬಹುದಾದ ಐದು ಮಾರ್ಗಗಳು ಇಲ್ಲಿವೆ:

1. ಹೆಚ್ಚು ಏರುಮುಖದ ರಸ್ತೆಯಲ್ಲಿ ನಡೆಯಿರಿ:

ಮೇಲ್ಮುಖವಾದ ರಸ್ತೆಯಲ್ಲಿ ನಡೆಯುವುದು ನಿಮ್ಮ ಶ್ವಾಸಕೋಶಗಳು, ಸ್ನಾಯುಗಳು ಮತ್ತು ಹೃದಯವನ್ನು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ, ಇದರ ಮೂಲಕ ನೀವು ಕ್ಯಾಲೋರಿಗಳನ್ನು ಬಹು ಬೇಗನೆ ಕಡಿಮೆ ಮಾಡಿಕೊಳ್ಳಬಹುದು. ಚುರುಕಾದ ನಡಿಗೆಯು ಹೃದಯ ರಕ್ತನಾಳದ ಕಾಯಿಲೆಗಳ ಅಪಾಯಗಳನ್ನು ತಡೆಯಲು ಸಹಾಯ ಮಾಡುತ್ತದೆ. ಕೆಲವು ಅಧ್ಯಯನಗಳು ವಾರಕ್ಕೆ ಐದು ಬಾರಿ ಚುರುಕಾಗಿ ನಡೆಯುವುದು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಸೂಚಿಸುತ್ತದೆ. ನೀವು ಟ್ರೆಡ್‌ಮಿಲ್ ಮಾಡುತ್ತಿದ್ದರೆ, ಅದರ ಓರೆಯನ್ನು ನೀವು ಏರುಮುಖಕ್ಕೆ ಹೊಂದಿಸಿಕೊಳ್ಳಬಹುದು.

2. ಚುರುಕಾದ ಮತ್ತು ನಿಧಾನಗತಿಯ ನಡಿಗೆಯ ಚಕ್ರವನ್ನು ಪುನರಾವರ್ತಿಸಿ:

ಇತ್ತೀಚಿನ ವರದಿಯ ಪ್ರಕಾರ, ಹೆಚ್ಚಿನ ತೀವ್ರತೆಯ ಮಧ್ಯಂತರ ತರಬೇತಿ (ಎಚ್ಐಐಟಿ) ಹೆಚ್ಚುವರಿ ಕ್ಯಾಲೋರಿಗಳನ್ನು ಮತ್ತು ಕೊಬ್ಬನ್ನು ತೊಡೆದು ಹಾಕಲು ತ್ವರಿತ ಮಾರ್ಗವಾಗಿದೆ. ನಿಮ್ಮ ಚುರುಕಾದ ನಡಿಗೆಯನ್ನು ನೀವು ಎಚ್ಐಐಟಿಗೆ ಹೇಗೆ ಪರಿವರ್ತಿಸಬಹುದು? ಏರುಮುಖದ ರಸ್ತೆಯಲ್ಲಿ ಅಥವಾ ಖಾಲಿ ಜಾಗದಲ್ಲಿ 5 ನಿಮಿಷಗಳ ತಡೆರಹಿತ ಚುರುಕಾದ ನಡಿಗೆ ಮತ್ತು ಸಮತಟ್ಟಾದ ರಸ್ತೆಯಲ್ಲಿ ಸುಮಾರು 3 ನಿಮಿಷಗಳ ಕಾಲ ನಿಧಾನಗತಿಯ ನಡಿಗೆ ಮಾಡಿ. ಉತ್ತಮ ಫಲಿತಾಂಶಗಳಿಗಾಗಿ, ಈ ಚಕ್ರವನ್ನು 20 ರಿಂದ 30 ನಿಮಿಷಗಳ ಕಾಲ ಹೀಗೆ ಪುನರಾವರ್ತಿಸಿ.

ಇದನ್ನೂ ಓದಿ: Weight Loss: ತೂಕ ಇಳಿಸಲು 3 ಸಿಂಪಲ್ ವರ್ಕೌಟ್ ಮಾಡಿ

3. ನಡೆಯುವಾಗ ಸ್ವಲ್ಪ ತೂಕಗಳನ್ನು ಎತ್ತಿಕೊಂಡು ಹೋಗಿ:

ನಿಮ್ಮ ದೈನಂದಿನ ನಡಿಗೆಯ ದಿನಚರಿಯ ಮಟ್ಟವನ್ನು ಹೆಚ್ಚಿಸಲು ನೀವು ಬಯಸಿದರೆ, ಕೆಲವು ಹಗುರವಾದ ಕೈ ತೂಕಗಳನ್ನು ಕೊಂಡೊಯ್ಯಿರಿ. ಆದರೂ, ಇವು ನಿಮ್ಮ ದೇಹವನ್ನು ಅತಿಯಾಗಿ ಒತ್ತಡಕ್ಕೆ ಗುರಿ ಮಾಡಬೇಡಿ. ನಿಮಗೆ ಸುಲಭ ಎನಿಸುವ ತೂಕದ ಮಿತಿಯನ್ನು ಅರಿತುಕೊಂಡು ಆರಂಭಿಕ ಹಂತದಲ್ಲಿ, ನಿಯಮಿತ ಚುರುಕಾದ ನಡಿಗೆಯಿಂದ ಪ್ರಾರಂಭಿಸಿ ಮತ್ತು ನಿಧಾನವಾಗಿ ತೂಕವನ್ನು ಅದಕ್ಕೆ ಸೇರಿಸಿಕೊಳ್ಳಿರಿ.

4. ನಿಮ್ಮ ಆಹಾರ ಕ್ರಮವನ್ನು ಗಮನಿಸಿ:

ನೀವು ಅನಾರೋಗ್ಯಕರ ಆಹಾರಗಳನ್ನು ತಿನ್ನುವುದನ್ನು ಹಾಗೆ ಮುಂದುವರಿಸಿದರೆ, ಯಾವುದೇ ವ್ಯಾಯಾಮವು ಪರಿಣಾಮಕಾರಿಯಾಗಿರುವುದಿಲ್ಲ. ಜಿಡ್ಡಿನ ಮತ್ತು ಎಣ್ಣೆಯುಕ್ತ ಪದಾರ್ಥಗಳನ್ನು ಸಂಪೂರ್ಣವಾಗಿ ಬಿಡಿ. ಕೆಲವೊಮ್ಮೆ ತೂಕ ಇಳಿಸುವ ಪ್ರಯತ್ನದಲ್ಲಿ ಜನರು ಹೆಚ್ಚಾಗಿ ಹಸಿವಿನಿಂದ ಬಳಲುತ್ತಾರೆ ಮತ್ತು ಹೆಚ್ಚು ಕ್ಯಾಲೋರಿ ಸೇವನೆ ಆಗಬಹುದೆಂದು ಊಟವನ್ನು ಕಡಿಮೆ ಮಾಡುತ್ತಾರೆ. ಇದು ನೀವು ಮಾಡುವ ಅತಿ ದೊಡ್ಡ ತಪ್ಪುಗಳಲ್ಲಿ ಒಂದಾಗಿದೆ. ನಿಮ್ಮ ಊಟವನ್ನು ಹೆಚ್ಚು ಸಮತೋಲಿತವಾಗಿ ಮಾಡಿ. ನಿಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ ಜೀವಸತ್ವಗಳು ಮತ್ತು ಖನಿಜಗಳನ್ನು ಸ್ವೀಕರಿಸಿ.

5. ನಿಮ್ಮ ಪಾನೀಯಗಳನ್ನು ಬುದ್ಧಿವಂತಿಕೆಯಿಂದ ಆರಿಸಿಕೊಳ್ಳಿ:

ದಣಿದ ವರ್ಕೌಟ್ ಸೆಷನ್ ನಂತರ, ಜನರು ಆಗಾಗ್ಗೆ ಬಾಟಲಿ ಅಥವಾ ಕ್ಯಾನ್‌ನ ಪಾನೀಯಗಳನ್ನು ಕುಡಿಯುತ್ತಾರೆ. ಅಂತಹ ಪ್ಯಾಕ್ ಮಾಡಿದ ಉತ್ಪನ್ನಗಳು ನಿಮ್ಮ ಫಿಟ್ನೆಸ್ ಪ್ರಯಾಣಕ್ಕೆ ಹಾನಿಕಾರಕ. ಅವು ನಿಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದ ಸಕ್ಕರೆ ಮತ್ತು ಕೃತಕ ಸಿಹಿಕಾರಕಗಳನ್ನು ಸೇರಿಸುತ್ತವೆ. ಇದಲ್ಲದೆ, ಈ ಉತ್ಪನ್ನಗಳಲ್ಲಿ ಇರುವ ಸಂರಕ್ಷಕ ಮತ್ತು ಸುವಾಸನೆಯ ಅಂಶಗಳು ದೀರ್ಘಾವಧಿಯಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ನೀರಿನ ಹೊರತಾಗಿ ನಿಮ್ಮ ಬಾಯಾರಿಕೆಯನ್ನು ತಣಿಸಲು, ತಾಜಾ ಹಣ್ಣಿನ ರಸಗಳು ಅಥವಾ ಎಳನೀರನ್ನು ಹೆಚ್ಚಾಗಿ ಕುಡಿಯಿರಿ.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

link

Leave a Reply

Your email address will not be published. Required fields are marked *