
ಆದರೆ ತೂಕ ಇಳಿಕೆಯಲ್ಲಿ ಆಯುರ್ವೇದ, ಮಸಾಲೆ ಪದಾರ್ಥ, ಮನೆಮದ್ದುಗಳ ಪಾತ್ರವನ್ನು ಹಲವಾರು ಜನ ನಿರ್ಲಕ್ಷಿಸಿಬಿಡುತ್ತಾರೆ. ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವ ದಾಲ್ಚಿನ್ನಿ, ಜೇನುತುಪ್ಪ, ನಿಂಬೆಯಿಂದ ಹಿಡಿದು ನೀರು ಸಹ ತೂಕವನ್ನು ಸ್ಥಿರವಾಗಿ ಕಳೆದುಕೊಳ್ಳಲು ಸಹಾಯ ಮಾಡುವ ಪದಾರ್ಥವಾಗಿದೆ. ಆಯುರ್ವೇದ ತಜ್ಞ ಡಾ. ಡಿಕ್ಸಾ ಭಾವ್ಸರ್ ಕೊಬ್ಬನ್ನು ಕರಗಿಸುವ ಪರಿಣಾಮಕಾರಿ ಮನೆಮದ್ದುಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ತೂಕ ಇಳಿಕೆಯಲ್ಲಿ ಮನೆ ಮದ್ದುಗಳು
1) ಬೆಚ್ಚಗಿನ ನೀರು:
ಬೆಚ್ಚಗಿನ ನೀರು ನಮ್ಮ ದೇಹದ ಹೆಚ್ಚುವರಿ ಕೊಬ್ಬಿನ ಅಂಗಾಂಶಗಳನ್ನು ಕರಗಿಸುವುದರಲ್ಲಿ ಪರಿಣಾಮಕಾರಿಯಾಗಿದೆ. ಇದು ಕೊಬ್ಬನ್ನು ತ್ವರಿತವಾಗಿ ಕರಗಿಸಲು ಸಹಾಯ ಮಾಡುತ್ತದೆ. ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಅದರಲ್ಲೂ ವಿಶೇಷವಾಗಿ ಖಾಲಿ ಹೊಟ್ಟೆಯಲ್ಲಿ ಎದ್ದ ತಕ್ಷಣ ಬಿಸಿ ನೀರು ಕುಡಿಯುವುದು ದೇಹಕ್ಕೆ ಹಲವು ಆರೋಗ್ಯ ಲಾಭಗಳನ್ನು ನೀಡುತ್ತದೆ.
2) ದಾಲ್ಚಿನ್ನಿ :
ನೈಸರ್ಗಿಕ ಮಸಾಲೆ ದಾಲ್ಚಿನ್ನಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ, ಕೊಲೆಸ್ಟ್ರಾಲ್ ಮತ್ತು ಕೊಬ್ಬನ್ನು ಕರಗಿಸುತ್ತದೆ. ಖಾಲಿ ಹೊಟ್ಟೆಯಲ್ಲಿ 1 ಚಮಚ ಜೇನುತುಪ್ಪದೊಂದಿಗೆ ಒಂದು ಚಿಟಿಕೆ ದಾಲ್ಚಿನ್ನಿ ಸೇವಿಸುವುದು ತೂಕ ಇಳಿಕೆಗೆ ಉತ್ತಮ.
3) ಗ್ರೀನ್ ಟೀ:
ಇದು ದೇಹದ ಚಯಾಪಚಯವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಸಹಾಯ ಮಾಡುತ್ತದೆ. ಇದು ಕ್ಯಾಟೆಚಿನ್ ಫ್ಲೇವನಾಯ್ಡ್ ಅನ್ನು ಹೊಂದಿದೆ, ಇದು ಉತ್ಕರ್ಷಣ ನಿರೋಧಕ ಮತ್ತು ಚಯಾಪಚಯವನ್ನು ಹೆಚ್ಚಿಸುತ್ತದೆ. 2010ರಲ್ಲಿ ಪ್ರಕಟವಾದ ಅಧ್ಯಯನವು ಕೆಫೀನ್ ಅಥವಾ ಕ್ಯಾಟೆಚಿನ್‌ಗಳನ್ನು ಒಳಗೊಂಡಿರುವ ಹಸಿರು ಚಹಾದ ಪೂರಕಗಳು ತೂಕ ನಷ್ಟದಲ್ಲಿ ಸಕಾರಾತ್ಮಕ ಪರಿಣಾಮವನ್ನು ಬೀರುತ್ತವೆ ಎಂದು ಹೇಳಿದೆ. ನಿಮ್ಮ ತೂಕ ಕಳೆದುಕೊಳ್ಳಲು ದಿನದಲ್ಲಿ ಒಂದು ಕಪ್ ಗ್ರೀನ್ ಟೀ ಸೇವನೆ ಸಾಕು.
ಇದನ್ನೂ ಓದಿ: Women Health Care: ಮಹಿಳೆಯರು ಈ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಹಾನಿಕರಕ
4) ನಿಂಬೆ:
ನಿಂಬೆ ಅತ್ಯಂತ ಪ್ರಸಿದ್ಧವಾದ ನೈಸರ್ಗಿಕ ತೂಕ ನಷ್ಟದ ಮನೆ ಮದ್ದಾಗಿದೆ. ಆದರೆ ಕೀಲು ನೋವು ಮತ್ತು ಅಧಿಕ ಆಮ್ಲೀಯತೆಯಿರುವ ಜನರು ಇದರ ಸೇವನೆ ತಪ್ಪಿಸಬೇಕು. ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ನಿಂಬೆ ರಸ ಸೇವನೆ ತೂಕ ಇಳಿಕೆಗೆ ಸಹಕಾರಿಯಾಗಿದೆ.
5) ಕರಿಮೆಣಸು:
ಬೆಳಗ್ಗೆ ನಿಂಬೆ ನೀರಿನೊಂದಿಗೆ ಒಂದು ಚಿಟಿಕೆ ಕರಿಮೆಣಸನ್ನು ಸಹ ಉಪಯೋಗಿಸಬಹುದು. ಇದು ನಿಮ್ಮ ತೂಕವನ್ನು ತ್ವರಿತವಾಗಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ
6) ನೆಲ್ಲಿಕಾಯಿ:
ಸ್ಥೂಲಕಾಯತೆ, ಥೈರಾಯ್ಡ್, ಮಧುಮೇಹ ಮತ್ತು ಮಲಬದ್ಧತೆಯ ಎಲ್ಲಾ ಅಸ್ವಸ್ಥತೆಗಳಿಗೆ ಸೂಕ್ತವಾದದ್ದು ನೆಲ್ಲಿಕಾಯಿ. ಇದರ ಹುಳಿ ರುಚಿ ನಿಮ್ಮ ಕೊಬ್ಬನ್ನು ತ್ವರಿತವಾಗಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
7) ತ್ರಿಫಲಾ: ಮಲಗುವ ವೇಳೆ ಬೆಚ್ಚಗಿನ ನೀರಿನ ಜೊತೆ ತ್ರಿಫಲಾ ಸೇವಿಸುವುದರಿಂದ ನಮ್ಮ ದೇಹದ ವಿಷವನ್ನು ಇದು ಹೊರಹಾಕುತ್ತದೆ. ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧಗೊಳಿಸುತ್ತದೆ, ಜೊತೆಗೆ ದೇಹವನ್ನು ಡಿಟಾಕ್ಸ್ ಮಾಡುತ್ತದೆ.
ಇದನ್ನೂ ಓದಿ: Weight Loss Tips: ತೂಕ ಇಳಿಸಿಕೊಳ್ಳಲು ಬಯಸುವವರು ಬೆಳಗಿನ ಉಪಾಹಾರದ ವೇಳೆ ಈ ಮುನ್ನೆಚ್ಚರಿಕೆಗಳನ್ನು ನೆನಪಿನಲ್ಲಿಡಿ
8) ಜೇನು: ಜೇನು ತೂಕ ಇಳಿಕೆಯಲ್ಲಿ ಹೆಚ್ಚು ಜನಪ್ರಿಯ ಆಹಾರ ಪದಾರ್ಥ. ಇದು ಅನಗತ್ಯ ಕೊಬ್ಬನ್ನು ತೆಗೆದು ಹಾಕುತ್ತದೆ. ಆದರೆ ಇದನ್ನು ನೀವು ಎಂದಿಗೂ ಬಿಸಿ ನೀರಿನಲ್ಲಿ ಸೇವಿಸಬಾರದು. ಬದಲಿಗೆ ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ
link