
ಪ್ರೋಟೀನ್‌ನಲ್ಲಿ ಸಮೃದ್ಧವಾಗಿರುವ ಪನೀರ್ ತೂಕ ನಷ್ಟಕ್ಕೆ ಪರಿಪೂರ್ಣವಾಗಿದೆ. ಇದು ನಿಮ್ಮ ಹಸಿವನ್ನು ಕಡಿಮೆ ಮಾಡುತ್ತದೆ, ನಿಮ್ಮ ಹೊಟ್ಟೆಯ ಕೊಬ್ಬನ್ನು ಕರಗಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಕೆಲವು ತೂಕವನ್ನು ನಿಯಂತ್ರಿಸುವ ಹಾರ್ಮೋನುಗಳ ಮಟ್ಟವನ್ನು ಬದಲಾಯಿಸುತ್ತದೆ. ಪನೀರ್ ನಿಮ್ಮ ದೇಹದಿಂದ ನಿಧಾನವಾಗಿ ಜೀರ್ಣವಾಗುತ್ತದೆ ಮತ್ತು ಅದು ನಿಮಗೆ ಹೆಚ್ಚು ಕಾಲ ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ. ಅಲ್ಲದೆ, ಇದು ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕೊಬ್ಬು, ಕಬ್ಬಿಣದಂತಹ ಇತರ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದೆ, ಇದು ಉತ್ತಮವಾದ ಆರೋಗ್ಯ, ದೇಹರಚನೆ ಪಡೆಯಲು ಸೂಕ್ತ ಆಯ್ಕೆಯಾಗಿದೆ.
ಹೈ-ಪ್ರೋಟೀನ್ ಸಮೃದ್ಧವಾಗಿರುವ ಪನೀರಿನಿಂದ ನೀವು ರುಚಿಕರವಾದ ಸಲಾಡ್ ರೆಸಿಪಿಗಳನ್ನು ಸೇವಿಸುವ ಮೂಲಕ ನಿಮ್ಮ ವೇಟ್ ಲಾಸ್ ಜರ್ನಿಯನ್ನು ಮುಂದುವರಿಸಬಹುದು.
5 ಹೈ-ಪ್ರೋಟೀನ್ ಪನೀರ್ ಸಲಾಡ್‌ಗಳು
1) ಪನೀರ್-ಬೀಟ್ರೂಟ್ ಸಲಾಡ್
ಪನೀರ್, ಬೀಟ್ರೂಟ್, ಬೇಯಿಸಿದ ರಾಜ್ಮಾ, ಸ್ವೀಟ್ ಕಾರ್ನ್, ಸಬ್ಬಸಿಗೆ ಎಲೆ, ನಿಂಬೆ ರಸ, ಚಾಟ್ ಮಸಾಲಾಗಳಿಂದ ಸಮೃದ್ಧವಾದ ಈ ಕಲರ್ ಫುಲ್ ಸಲಾಡ್ ಆರೋಗ್ಯಕರ ಮತ್ತು ರುಚಿಕರವಾಗಿರುತ್ತದೆ. ನಿಮಗೆ ಏನ್ನಾನದರೂ ತಿನ್ನುವ ಬಯಕೆ ಆದರೆ ಸೀದಾ ಈ ಸಲಾಡ್ ಮೊರೆ ಹೋಗಬಹುದು.
ಇದನ್ನೂ ಓದಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ಸೆಂಟರ್ ಹುಡುಕುವಾಗ ಈ ಟಿಪ್ಸ್ ಫಾಲೋ ಮಾಡಿ
2) ಪನೀರ್-ಖೀರಾ ಸಲಾಡ್
ಪ್ರೋಟೀನ್-ಭರಿತ ಆಹಾರ ಪನೀರ್-ಖೀರಾ ಸಲಾಡ್ ನಿಮ್ಮ ತೂಕ ಇಳಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸಲು ಸಹಕಾರಿಯಾಗಿದೆ. ಈ ಸಲಾಡ್ ಹೆಚ್ಚಿನ ಫ್ರೋಟೀನ್ ಹೊಂದಿರುವ ಪನೀರ್, ಕಡಿಮೆ ಕ್ಯಾಲೋರಿ ಹೊಂದಿದ ಸೌತೆಕಾಯಿಯನ್ನು ಹೊಂದಿರುತ್ತದೆ. ಈ ಪೌಷ್ಟಿಕ ಸಲಾಡ್ ವಿವಿಧ ಪೋಷಕಾಂಶಗಳೊಂದಿಗೆ ಉತ್ತಮ ರುಚಿ ನೀಡುತ್ತದೆ. ಇದರಲ್ಲಿ ಈರುಳ್ಳಿ, ಟೋಮ್ಯಾಟೊದ ಸವಿಯು ಸಹ ಇದೆ.
3) ಮೊಳಕೆ ಪನೀರ್ ಸಲಾಡ್
ತೂಕ ನಷ್ಟದಲ್ಲಿ ಆಹಾರದ ಪಾತ್ರವನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಅತಿಯಾಗಿ ತಿನ್ನುವುದು ನಮ್ಮ ಒಟ್ಟಾರೆ ಆರೋಗ್ಯದ ಮೇಲೆ, ವಿಶೇಷವಾಗಿ ನಮ್ಮ ದೇಹದ ತೂಕದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೆಚ್ಚಿನ ಕ್ಯಾಲೋರಿ ಲೋಡ್ ಅಂತಿಮವಾಗಿ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಅವುಗಳಿಂದ ದೂರವಿರಲು, ಇಂತಹ ಸಲಾಡ್ಗಳನ್ನು ಸೇವಿಸಬೇಕು.
ಮೊಳಕೆ ಕಾಳುಗಳು ಮತ್ತು ಪನೀರ್ ಸಲಾಡ್‌ನ ಎರಡು ಮುಖ್ಯ ಪದಾರ್ಥಗಳು ಖನಿಜಗಳಿಂದ ತುಂಬಿರುತ್ತವೆ ಮತ್ತು ಹೆಚ್ಚಿನ ಪ್ರೋಟೀನ್ ಹೊಂದಿವೆ. ಈರುಳ್ಳಿ, ಟೊಮ್ಯಾಟೊ, ಮೆಣಸು ಪುಡಿಯ ಮಿಶ್ರಣವು ಈ ಸಲಾಡ್‌ನ ರುಚಿ ಹೆಚ್ಚಿಸುತ್ತದೆ. ಇದರಲ್ಲಿರುವ ಹೆಚ್ಚಿನ ಪ್ರೋಟೀನ್ ಅಂಶವು ತೂಕ ನಷ್ಟಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ.
4) ಕೋಲ್ಡ್ ಪನೀರ್ ಸಲಾಡ್
ಈ ಹಗುರವಾದ ರುಚಿಯ ಕೋಲ್ಡ್ ಸಲಾಡ್ ನಿಮ್ಮ ದಿನದ ಆರೋಗ್ಯಕರ ಆರಂಭಕ್ಕೆ ಸೂಕ್ತವಾಗಿದೆ. ಇದು ಪನೀರ್, ಕಾರ್ನ್ ಮತ್ತು ಆಲೂಗಡ್ಡೆ, ಸ್ಪ್ರಿಂಗ್ ಆನಿಯನ್, ಗ್ರೀನ್ ಆಲಿವ್ಸ್, ಹಸಿರು ಮೆಣಸಿನಕಾಯಿ, ಪೆಪ್ಪರ್, ಜೀರಿಗೆ ಪುಡಿ, ಹನಿ, ಕೊತ್ತಂಬರಿ ಪುಡಿಗಳೊಂದಿಗೆ ತಯಾರಿಸಿದ ತ್ವರಿತ ಮತ್ತು ಸುಲಭವಾದ ಖಾದ್ಯವಾಗಿದ್ದು ತೂಕ ನಷ್ಟ ಪ್ರಯಾಣದಲ್ಲಿ ಸಹಕಾರಿಯಾಗಿದೆ.
ಇದನ್ನೂ ಓದಿ: ಈ ಆಯುರ್ವೇದ ಟಿಪ್ಸ್ ಯೂಸ್ ಮಾಡಿದ್ರೆ ತ್ವಚೆಯ ಸರ್ವ ಸಮಸ್ಯೆಗೆ ಪರಿಹಾರ ಸಿಗುತ್ತೆ
5) ಫ್ರೂಟ್ ಪನೀರ್ ಸಲಾಡ್
ಈ ಸುಲಭವಾದ ಪಾಕವಿಧಾನದಲ್ಲಿ ತರಕಾರಿ ಬದಲಿಗೆ ಹಣ್ಣುಗಳನ್ನು ಬಳಸಬಹುದು. ಬೇಸಿಗೆಯನ್ನು ದಾಳಿಂಬೆ, ಕಿವಿ ಮತ್ತು ಇತರ ಹಣ್ಣುಗಳ ಸಲಾಡ್ ಸೇವಿಸುವ ಮೂಲಕ ರಿಫ್ರೆಶ್ ಮಾಡಬಹುದು. ಅಷ್ಟೇ ಅಲ್ಲ, ಹಣ್ಣುಗಳ ಸಲಾಡಿಗೆ ಕಿತ್ತಳೆ ಮತ್ತು ಪುದೀನ ಡ್ರೆಸ್ಸಿಂಗ್ ರಿಫ್ರೆಶಿಂಗ್ ಟಚ್ ಅನ್ನು ನೀಡುತ್ತದೆ.
ಹಾಗಾದರೆ, ಈ ರುಚಿಕರವಾದ ಪನೀರ್ ಸಲಾಡ್ ರೆಸಿಪಿಗಳೊಂದಿಗೆ ನಿಮ್ಮ ತೂಕ ಇಳಿಸುವ ಪ್ರಯಾಣವನ್ನು ಹೆಚ್ಚು ಆನಂದಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ
link