December 3, 2023
ಇತ್ತೀಚಿನ ದಿನಗಳಲ್ಲಿ (Now a Days) ತೂಕ ಹೆಚ್ಚಾಗುವುದು (Weight Gain) ಮತ್ತು ತೂಕ ಇಳಿಸಿಕೊಳ್ಳುವುದು (Weight Loss) ಒಂದು ದೊಡ್ಡ ಸಮಸ್ಯೆ (Problem) ಆಗಿ ಮಾರ್ಪಟ್ಟಿದೆ. ಹೆಚ್ಚುತ್ತಿರುವ ಬೊಜ್ಜು ಅನೇಕ ಕಾಯಿಲೆ ಉಂಟು ಮಾಡುವ ಜೊತೆಗೆ ನಿಮ್ಮ ಸೌಂದರ್ಯ ಹಾಳು ಮಾಡುತ್ತದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ, ಜಾಯಿಂಟ್ ನೋವು, ಬೆನ್ನು ನೋವು ಸೇರಿದಂತೆ ಅನೇಕ ಗಂಭೀರ ಕಾಯಿಲೆಗಳು ದೇಹವನ್ನು ಸೇರಿಕೊಳ್ಳುತ್ತವೆ. ತೂಕ ನಷ್ಟದ ಸಲಹೆ ಹಾಗೂ ಹಲವು ಪಯತ್ನಗಳು ಎಷ್ಟೇ ಹರಸಾಹಸ ಪಟ್ಟರೂ ಅದ್ಯಾವುದೂ ತ್ವರಿತ ತೂಕ ಇಳಿಕೆಗೆ ಫಲಿತಾಂಶ ನೀಡುವುದಿಲ್ಲ. ಹಾಗಾಗಿ ತೂಕ ಇಳಿಸಿಕೊಳ್ಳುವ ವಿಚಾರದಲ್ಲಿ ತಾಳ್ಮೆ ತುಂಬಾ ಅಗತ್ಯ.

ಆಯುರ್ವೇದ ವೈದ್ಯೆ ದೀಕ್ಷಾ ಭಾವ್‌ಸರ್ ಸಲಹೆ

ಇದು ತೂಕ ಕಡಿಮೆ ಮಾಡುವ ವಿಷಯದಲ್ಲಿ ಎಲ್ಲಾ ಜನರಿಗೆ ಸಮಾನವಾಗಿ ರಿಸಲ್ಟ್ ಕೊಡುತ್ತದೆ. ಆಯುರ್ವೇದ ವೈದ್ಯೆ ದೀಕ್ಷಾ ಭಾವ್‌ಸರ್ ಕೆಲವು ಪರಿಹಾರ ಹೇಳಿದ್ದಾರೆ ಅದ್ಯಾವವು ಅನ್ನೋದನ್ನ ನೋಡೋಣ ಬನ್ನಿ.

ಸಿರ್ಕಾಡಿಯನ್ ರಿದಮ್ ಉಪವಾಸ

ನಿಮ್ಮ ಆಹಾರ ಕ್ರಮವನ್ನು ಬದಲಾಯಿಸುವ ಮತ್ತು ಅದನ್ನು ಅತ್ಯಂತ ಕಡಿಮೆ ಕ್ಯಾಲೋರಿಗೆ ಇಳಿಸುವ ಮೂಲಕ ನೀವು ಸಿರ್ಕಾಡಿಯನ್ ರಿದಮ್ ಉಪವಾಸ ಫಾಲೋ ಮಾಡಬಹುದು. ಸಿರ್ಕಾಡಿಯನ್ ರಿದಮ್ ಉಪವಾಸ ಮಾಡುವವರು ಹಗಲು ಹೊತ್ತಿನಲ್ಲಿ,

ಇದನ್ನೂ ಓದಿ: ಬಾದಾಮಿ ತಿಂದು ಸಿಪ್ಪೆ ಎಸೆಯೋ ಮುನ್ನ ಅದರ ಪ್ರಯೋಜನ ತಿಳಿಯಿರಿ!

ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವೆ ತಿನ್ನಬಹುದು. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ತಿನ್ನುವುದು ಎಂದರೆ 12 ಗಂಟೆಗಳ ಕಾಲ ಆಹಾರ ಸೇವಿಸುವ ಅನುಮತಿ ಇದೆ. ಮತ್ತು ಇನ್ನು 12 ಗಂಟೆಗಳ ಕಾಲ ಉಪವಾಸ ಮಾಡಬೇಕು.

ಉದಾಹರಣೆಗೆ ನೀವು ಬೆಳಿಗ್ಗೆ 7-8 ಕ್ಕೆ ಉಪಹಾರ ಮತ್ತು 7-8 ಕ್ಕೆ ರಾತ್ರಿಯ ಊಟ ಸೇವಿಸಿದರೆ ರಾತ್ರಿಯ ಊಟದಿಂದ ಮರುದಿನದ ಉಪಹಾರದವರೆಗೆ ನೀರನ್ನು ಹೊರತುಪಡಿಸಿ ಏನನ್ನೂ ತಿನ್ನುವಂತಿಲ್ಲ. ಇದು ನಿಮ್ಮ ದೇಹವು ನೀವು ತಿನ್ನುವ ಎಲ್ಲವನ್ನೂ ಜೀರ್ಣಿಸಿಕೊಳ್ಳಲು ಮತ್ತು ಅನಗತ್ಯವಾದ ಎಲ್ಲವನ್ನೂ ಹೊರಹಾಕಲು ಸಹಾಯ ಮಾಡುತ್ತದೆ.

ಹೆಚ್ಚು ನೀರು ಕುಡಿಯುವುದು

ಸಾಕಷ್ಟು ನೀರು ಕುಡಿಯುವುದು ಹಸಿವು ನಿಗ್ರಹಿಸಲು ಸಹಕಾರಿ ಆಗಿದೆ. ನಿಮ್ಮ ದೇಹವನ್ನು ನಿರ್ವಿಷಗೊಳಿಸಲು ಸಾಕಷ್ಟು ನೀರು ಕುಡಿಯುವುದು ಉತ್ತಮ. ಇದು ಜೀರ್ಣಕ್ರಿಯೆ ಸುಧಾರಣೆಗೆ ಸಹಕಾರಿ. ಕಡಿಮೆ ನೀರು ಸೇವಿಸುವುದು ಮಲಬದ್ಧತೆ, ನಿರ್ಜಲೀಕರಣವು ಹಾರ್ಮೋನ್‌ ಅಸಮತೋಲನ ಹಾಗೂ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಕೊಬ್ಬನ್ನು ಕಡಿಮೆ ಮಾಡಲು ಬಿಸಿನೀರು ಸೇವನೆ ಮಾಡಿ.

ಈ ವಿಧಾನಗಳಲ್ಲಿ ತೂಕ ಇಳಿಸಿಕೊಳ್ಳಿ

ಇಪ್ಪತ್ತು ನಿಮಿಷಗಳ ಆಳವಾದ ಉಸಿರಾಟ ಮತ್ತು 40 ನಿಮಿಷಗಳ ದೈಹಿಕ ಚಟುವಟಿಕೆ

ದೈಹಿಕ ಚಟುವಟಿಕೆ ದೇಹದಾದ್ಯಂತ ರಕ್ತ ಪರಿಚಲನೆ ಸುಧಾರಿಸಲು ಸಹಕಾರಿ. ಮತ್ತು ದೇಹದ ಎಲ್ಲಾ ಜೀವಕೋಶಗಳಿಗೆ ಸಾಕಷ್ಟು ಪೋಷಣೆ ಮತ್ತು ಆಮ್ಲಜನಕ ಒದಗಿಸುತ್ತದೆ. ಆಳವಾದ ಉಸಿರಾಟ  ಮನಸ್ಸನ್ನು ಶಾಂತಗೊಳಿಸುತ್ತದೆ. ಬುದ್ದಿಪೂರ್ವಕವಾಗಿ ತಿನ್ನುವುದು ದೇಹಕ್ಕೆ ಅಗತ್ಯವಿರುವುಷ್ಟೇ ಆಹಾರ ಸೇವನೆಗೆ ಉತ್ತೇಜಿಸುತ್ತದೆ.

ಚೆನ್ನಾಗಿ ನಿದ್ದೆ ಮಾಡುವುದು

ದೇಹದಿಂದ ಹೆಚ್ಚುವರಿ ಕೊಬ್ಬು ಕಡಿಮೆ ಮಾಡಲು ಚೆನ್ನಾಗಿ ನಿದ್ರೆ ಮಾಡುವುದು ಉತ್ತಮ ಮಾರ್ಗ. ರಾತ್ರಿ 10 ಗಂಟೆಯವರೆಗೆ ನಿದ್ರಿಸುವುದು ಯಕೃತ್ತನ್ನು ನಿರ್ವಿಷಗೊಳಿಸುತ್ತದೆ. ಏಕೆಂದರೆ ಪಿಟ್ಟಾವು 10 PM ಮತ್ತು 2 PM ರ ನಡುವಿನ ಪ್ರಮುಖ ಸಮಯ. ಇದು ತ್ವರಿತ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: ನೀವು ಬಳಸುವ ಟೂತ್ ಪೇಸ್ಟ್ ನಿಮ್ಮ ಹಲ್ಲುಗಳಿಗೆ ಎಷ್ಟು ಉತ್ತಮ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

ಸಕ್ಕರೆ, ಹುರಿದ ಮತ್ತು ಸಂಸ್ಕರಿಸಿದ ಆಹಾರ ಸೇವನೆ ಮಾಡಿ

ಈ ಆಹಾರಗಳನ್ನು ಸೇವಿಸದಿರುವುದು ಯಕೃತ್ತಿನ ಮೇಲೆ ಕಡಿಮೆ ಒತ್ತಡ ಉಂಟು ಮಾಡುತ್ತದೆ. ಇದು ಉತ್ತಮ ಜೀರ್ಣಕ್ರಿಯೆ ಮತ್ತು ನಿರ್ವಿಶೀಕರಣಕ್ಕೆ ಸಹಕಾರಿ. ಕರುಳಿನ ಉರಿಯೂತ ಕಡಿಮೆ ಮಾಡುತ್ತದೆ, ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಕಾರಿ.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

link

Leave a Reply

Your email address will not be published. Required fields are marked *