
ಸಕಾಲದಲ್ಲಿ ಬೊಜ್ಜು ಕಡಿಮೆಯಾಗದಿದ್ದರೆ ಸಮಸ್ಯೆ ಹೆಚ್ಚುತ್ತದೆ
ನೀರಿನಂಶವಿರುವ ಹಣ್ಣು ಮತ್ತು ತರಕಾರಿಗಳ ಸೇವನೆ ತೂಕ ನಿಯಂತ್ರಿಸುತ್ತದೆ. ಕಲ್ಲಂಗಡಿ, ಕರ್ಬೂಜ, ಸೌತೆಕಾಯಿ ಮತ್ತು ಇತರ ಹಣ್ಣುಗಳನ್ನು ತಿನ್ನುವ ಮೂಲಕ ನಿಮ್ಮ ತೂಕ ಕಡಿಮೆ ಮಾಡಬಹುದು. ನೀವು ಹೊಟ್ಟೆಯ ಕೊಬ್ಬು ಮತ್ತು ತೂಕ ಕಡಿಮೆ ಮಾಡಲು ಬಯಸಿದರೆ ಕೆಲ ಸಲಹೆ ಪಾಲಿಸಲೇಬೇಕು. ಸಕಾಲದಲ್ಲಿ ಬೊಜ್ಜು ಕಡಿಮೆಯಾಗದಿದ್ದರೆ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.
ತೂಕ ಕಳೆದುಕೊಳ್ಳುವುದು ಸವಾಲಿಗಿಂತ ಕಡಿಮೆಯಿಲ್ಲ. ಕೆಲವರು ಜಿಮ್‌ನಲ್ಲಿ ಬೆವರು ಹರಿಸಿ ವೇಟ್ ಲಾಸ್ ಮಾಡುತ್ತಾರೆ. ಕೆಲವರು ವೈದ್ಯರ ಸಲಹೆ ಪಡೆಯುತ್ತಾರೆ. ಕೆಲವು ಆಯುರ್ವೇದ ಸಲಹೆಗಳನ್ನು ಪಾಲಿಸುವ ಮೂಲಕ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಮಹಿಳೆಯರಲ್ಲಿ ಪದೇ ಪದೇ ಮೂತ್ರನಾಳ ಸೋಂಕು ಉಂಟಾಗಲು ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ
ತೂಕ ಇಳಿಸಿಕೊಳ್ಳಲು ಪ್ರಮುಖ ಸಲಹೆ
ನೀವು ಮಧ್ಯಾಹ್ನದ ಊಟ ಸೇವನೆ ಮಾಡಿದಾಗ, ದಿನದ ಕ್ಯಾಲೋರಿಗಳ ಅರ್ಧದಷ್ಟು ಭಾಗವನ್ನು ಸೇವಿಸಿ. ಏಕೆಂದರೆ ಮಧ್ಯಾಹ್ನದ ವೇಳೆಯಲ್ಲಿ ಜೀರ್ಣಶಕ್ತಿ ಬಲವಾಗಿರುತ್ತದೆ. ಊಟದ ಸಮಯದಲ್ಲಿ ನೀವು ಕಡಿಮೆ ಕ್ಯಾಲೊರಿ ಸೇವನೆ ಮಾಡಿ.
ಸಂಸ್ಕರಿಸಿದ ಎಣ್ಣೆ ಮತ್ತು ಕಾರ್ಬೋಹೈಡ್ರೇಟ್‌ಗಳ ಸೇವನೆ ಕಡಿಮೆ ಮಾಡಿ
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು, ನೀವು ಸಂಸ್ಕರಿಸಿದ ಎಣ್ಣೆ ಮತ್ತು ಕಾರ್ಬೋಹೈಡ್ರೇಟ್‌ಗಳ ಸೇವನೆ ಕಡಿಮೆ ಮಾಡಬೇಕು. ನೀವು ಸಕ್ಕರೆ ಪಾನೀಯ, ಸಿಹಿತಿಂಡಿ, ಪಾಸ್ಟಾ, ಬ್ರೆಡ್, ಬಿಸ್ಕತ್ತು ಮತ್ತು ಎಣ್ಣೆಯುಕ್ತ ಆಹಾರಗಳಿಂದ ದೂರವಿರಿ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತ್ಯ ಪುಡಿ ಸೇವಿಸಿ
ತೂಕ ನಷ್ಟಕ್ಕೆ, ಮೆಂತ್ಯ ಪುಡಿ ತೆಗೆದುಕೊಂಡು ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ನೀರಿನೊಂದಿಗೆ ಸೇವಿಸಿ. ಇದರಿಂದ ನೀವು ಸಹ ಪ್ರಯೋಜನ ಪಡೆಯಬಹುದು. ಇದಲ್ಲದೆ, ನೀವು ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೆನೆಸಿ ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದು.
ಆಹಾರದಲ್ಲಿ ತ್ರಿಫಲ ಚೂರ್ಣ ಸೇರಿಸಿ
ತೂಕ ನಷ್ಟಕ್ಕೆ ನಿಮ್ಮ ಆಹಾರದಲ್ಲಿ ತ್ರಿಫಲ ಚೂರ್ಣ ಸೇರಿಸಿ ಸೇವನೆ ಮಾಡಿ. ಇದು ದೇಹದಿಂದ ವಿಷ ತೆಗೆದು ಹಾಕಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಜೀರ್ಣಾಂಗ ವ್ಯವಸ್ಥೆ ಸರಿ ಮಾಡುತ್ತದೆ. ಒಂದು ಚಮಚ ತ್ರಿಫಲ ಪುಡಿ ತೆಗೆದುಕೊಂಡು ರಾತ್ರಿಯ ಊಟದ ನಂತರ ಬೆಚ್ಚಗಿನ ನೀರಿನಲ್ಲಿ ಸೇವನೆ ಮಾಡಿ.
ಇದನ್ನೂ ಓದಿ: ನಿಮ್ಮ ಆಹಾರದಲ್ಲಿ ಈ ಪದಾರ್ಥಗಳಿದ್ದರೆ ಹೃದಯದ ಆರೋಗ್ಯಕ್ಕೆ ಬೆಸ್ಟ್ ಅಂತೆ!
ತೂಕ ಕಡಿಮೆ ಮಾಡಲು ಒಣ ಶುಂಠಿ
ಒಣ ಶುಂಠಿ ತೂಕ ಕಡಿಮೆ ಮಾಡಲು ಸಹ ಪ್ರಯೋಜನಕಾರಿ. ಒಣ ಶುಂಠಿ ಪುಡಿ ತೆಗೆದುಕೊಳ್ಳಿ. ಇದು ಥರ್ಮೋಜೆನಿಕ್ ಏಜೆಂಟ್ ಹೊಂದಿದೆ. ಇದು ಕೊಬ್ಬು ಸುಡಲು ಉಪಯುಕ್ತವಾಗಿದೆ. ಬಿಸಿ ನೀರಿನಲ್ಲಿ ಒಣ ಶುಂಠಿ ಸೇವನೆ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ. ಮತ್ತು ಹೆಚ್ಚುವರಿ ಕೊಬ್ಬನ್ನು ಸುಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ
link