ರಾತ್ರಿ ವೇಳೆ ಜೇನುತುಪ್ಪ ಸೇವನೆ ಮಾಡಿದರೆ ತೂಕ ಕಡಿಮೆಯಾಗಬಹುದು. ತೂಕ ಇಳಿಸಲು ನೀವು ಮೂರು ಪ್ರಕಾರಗಳಲ್ಲಿ ಜೇನುತುಪ್ಪ ಸೇವನೆ ಮಾಡಬಹುದು. ಹೇಗೆ ಎಂಬುದನ್ನು ಇಲ್ಲಿ ತಿಳಿಯೋಣ.
ತೂಕ ನಷ್ಟಕ್ಕೆ ಜೇನುತುಪ್ಪವನ್ನು ಬಳಸುವುದು ಹೇಗೆ?
ಅಮೆರಿಕನ್ ಕಾಲೇಜ್ ಆಫ್ ನ್ಯೂಟ್ರಿಷನ್ ನಡೆಸಿದ ಅಧ್ಯಯನದ ಪ್ರಕಾರ, ಜೇನುತುಪ್ಪವನ್ನು ಸೇವಿಸುವ ಮೂಲಕ ಹಸಿವನ್ನು ನಿಯಂತ್ರಿಸಬಹುದು. ರಾತ್ರಿ ಜೇನುತುಪ್ಪ ಸೇವನೆ ಮಾಡುವ ಮೂಲಕ, ಮಲಗುವ ಮುನ್ನ ಒಂದು ಗಂಟೆಯಲ್ಲಿ ನೀವು ಹೆಚ್ಚಿನ ಕ್ಯಾಲೊರಿ ಬರ್ನ್ ಮಾಡಬಹುದು. ತೂಕ ಇಳಿಸಲು ಇದು ತುಂಬಾ ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ: ದೀರ್ಘಕಾಲ ಕುಳಿತುಕೊಳ್ಳುತ್ತೀರಾ? ಉಬ್ಬಿರುವ ರಕ್ತನಾಳ ಸಮಸ್ಯೆ ಬರದಂತೆ ಇರಲಿ ಎಚ್ಚರ
ಜೇನುತುಪ್ಪ ಮತ್ತು ಬೆಳ್ಳುಳ್ಳಿ ಸೇವನೆಯ ಪ್ರಯೋಜನಗಳು
ಬೆಳ್ಳುಳ್ಳಿಯನ್ನು ಜೇನುತುಪ್ಪದ ಜೊತೆ ಸೇರಿಸಿ ಸೇವನೆ ಮಾಡುವುದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ರುಚಿ ಮತ್ತು ವಾಸನೆಯಿಂದಾಗಿ ಕಚ್ಚಾ ಬೆಳ್ಳುಳ್ಳಿ ಸೇವಿಸುವುದು ಕಷ್ಟ ಸಾಧ್ಯ. ಆದರೆ ಇದನ್ನು ಜೇನುತುಪ್ಪದ ಜೊತೆ ಸುಲಭವಾಗಿ ಸೇವಿಸಬಹುದು. ಜೇನುತುಪ್ಪ ಮತ್ತು 2 ಹಸಿ ಬೆಳ್ಳುಳ್ಳಿ ಎಸಳುಗಳನ್ನು ಒಂದು ಲೋಟ ಉಗುರುಬೆಚ್ಚಗಿನ ನೀರಿನೊಂದಿಗೆ ತಿನ್ನಿರಿ.
ಜೇನುತುಪ್ಪ ಮತ್ತು ಹಾಲು ಸೇವನೆಯ ಪ್ರಯೋಜನಗಳು
ಅನೇಕ ಜನರು ರಾತ್ರಿ ಹಾಲು ಕುಡಿಯುತ್ತಾರೆ. ಆದರೆ ತೂಕ ಕಡಿಮೆ ಮಾಡಲು ನೀವು ಅದಕ್ಕೆ ಶುದ್ಧ ಜೇನುತುಪ್ಪ ಸೇರಿಸಿ ಸೇವಿಸಿ. ಇದು ನಿಮ್ಮ ಮೆಟಾಬಾಲಿಸಂ ವೇಗವಾಗಿಸುತ್ತದೆ. ಮತ್ತು ನೀವು ಗಾಢ ನಿದ್ರೆ ಪಡೆಯುತ್ತೀರಿ. ವೇಗದ ಚಯಾಪಚಯವು ಹೆಚ್ಚು ಕೊಬ್ಬನ್ನು ಸುಡುತ್ತದೆ. ಸಾಕಷ್ಟು ನಿದ್ರೆ ಮಾಡುವುದು ಜೀವಕೋಶಗಳನ್ನು ಸರಿಪಡಿಸುತ್ತದೆ.
ಜೇನುತುಪ್ಪ ಮತ್ತು ನಿಂಬೆ ನೀರಿನ ಪ್ರಯೋಜನಗಳು
ಜೇನುತುಪ್ಪ ಮತ್ತು ನಿಂಬೆ ನೀರಿನ ಸೇವನೆಯು ತೂಕ ನಷ್ಟಕ್ಕೆ ಅತ್ಯಂತ ಜನಪ್ರಿಯ ಪರಿಹಾರ. ಉಗುರು ಬೆಚ್ಚಗಿನ ನೀರಿಗೆ ಲಿಂಬೆ ರಸ ಮತ್ತು ಜೇನುತುಪ್ಪ ಬೆರೆಸಿ ದಿನದ ಯಾವುದೇ ಸಮಯದಲ್ಲಿ ಬೇಕಾದ್ರೂ ಇದನ್ನು ಸೇವಿಸಬಹುದು.
ತೂಕ ನಷ್ಟಕ್ಕೆ ಕ್ಯಾರೆಟ್ ಸೇವಿಸಿ
ಕ್ಯಾರೆಟ್‌ನಲ್ಲಿ ನಾರಿನಂಶ ಹೆಚ್ಚು ಇದೆ. ಇದರಿಂದ ಹೊಟ್ಟೆ ತುಂಬಾ ಹೊತ್ತು ತುಂಬಿದ ಭಾವನೆ ಇರುತ್ತದೆ. ತೂಕ ನಷ್ಟಕ್ಕೆ ನೀವು ಕ್ಯಾರೆಟ್ ಜ್ಯೂಸ್ ಅಥವಾ ಅದರ ಸೂಪ್ ನ್ನು ಕುಡಿಯಬಹುದು.
ದಾಲ್ಚಿನ್ನಿ ತೂಕ ಕಡಿಮೆ ಮಾಡುತ್ತದೆ
ದಾಲ್ಚಿನ್ನಿ ತೂಕ ಡಿಮೆ ಮಾಡುತ್ತದೆ. ದಾಲ್ಚಿನ್ನಿ ಸಿನ್ನಮಾಲ್ಡಿಹೈಡ್ ನ್ನು ಹೊಂದಿದೆ. ಇದು ಕೊಬ್ಬಿನ ಒಳಾಂಗಗಳ ಅಂಗಾಂಶಗಳ ಚಯಾಪಚಯ ಉತ್ತೇಜಿಸುತ್ತದೆ. ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ. ಇದರ ಚಹಾ ಸೇವನೆ ಹೊಟ್ಟೆಯ ಕೊಬ್ಬು ಕರಗಿಸುತ್ತದೆ.
ಏಲಕ್ಕಿ ತೂಕ ಕಡಿಮೆ ಮಾಡುತ್ತದೆ
ತೂಕ ಇಳಿಸುವಲ್ಲಿ ಏಲಕ್ಕಿ ಸೇವನೆ ಪ್ರಯೋಜನಕಾರಿ. ಏಲಕ್ಕಿಯಲ್ಲಿ ಕಂಡು ಬರುವ ಮೆಲಟೋನಿನ್, ಚಯಾಪಚಯ ದರ ಹೆಚ್ಚಿಸುತ್ತದೆ. ಇದು ದೇಹವು ಕೊಬ್ಬನ್ನು ವೇಗವಾಗಿ ಸುಡಲು ಸಹಾಯ ಮಾಡುತ್ತದೆ. ರಾತ್ರಿ ಮಲಗುವ ಮುನ್ನ 4 ಏಲಕ್ಕಿ ಸೇವಿಸಿ, ಉಗುರು ಬೆಚ್ಚಗಿನ ನೀರು ಕುಡಿಯಿರಿ.
ಇದನ್ನೂ ಓದಿ: ಚರ್ಮದ ವಿವಿಧ ಭಾಗಗಳಲ್ಲಿ ತುರಿಕೆ! ಇದಕ್ಕೇನು ಪರಿಹಾರ?
ಮೊಸರು ತೂಕ ಕಡಿಮೆ ಮಾಡುತ್ತದೆ
ಮೊಸರು ಕಡಿಮೆ ಕಾರ್ಬ್ ಮತ್ತು ಹೆಚ್ಚಿನ ಪ್ರೋಟೀನ್ ಹೊಂದಿದೆ. ಇದು ತೂಕ ನಷ್ಟ ಮಾಡುತ್ತದೆ. ಮೊಸರಿನಲ್ಲಿರುವ ಪ್ರೋಟೀನ್ ತೆಳ್ಳಗಿನ ಸ್ನಾಯುವಿನ ದ್ರವ್ಯರಾಶಿ ಕಾಪಾಡಲು, ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ
link