
ವಾಕಿಂಗ್ ಮಾಡಲು ಕೂಡ ಸರಿಯಾದ ವಿಧಾನ ಇದೆ ಆದರೆ ಅನೇಕರಿಗೆ ಇದು ತಿಳಿದಿಲ್ಲ. ವಾಕಿಂಗ್ ಅಂದರೆ ಕೇವಲ ಹೆಜ್ಜೆಗಳನ್ನು ಎಣಿಸುವುದಲ್ಲ, ಅದರಲ್ಲಿ ಇನ್ನೂ ಕೆಲವು ವಿಷಯಗಳಿದ್ದು, ಅದರ ಬಗ್ಗೆ ನಾವು ಗಮನಹರಿಸಿದರೆ ಸಣ್ಣ ಆಗುವ ಪ್ರಕ್ರಿಯೆಯು ಹೆಚ್ಚು ಪರಿಣಾಮಕಾರಿ ಆಗಬಹುದು. ಉತ್ತಮ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯೊಂದಿಗೆ ವಾಕಿಂಗ್ ಮಾತ್ರ ನಿಮ್ಮ ತೂಕ ನಷ್ಟಕ್ಕೆ ಉತ್ತಮ ತಂತ್ರವಾಗಿದೆ. ಜಿಮ್ ಹೋಗಲು ಸಾಧ್ಯವಾಗದೇ ಇರುವವರಿಗೆ ವಾಕಿಂಗ್ ಒಂದು ಉತ್ತಮ ವ್ಯಾಯಾಮವಾಗಿದೆ.
ವಾಕಿಂಗ್ ಒಂದು ಕಲೆ
ವಾಕಿಂಗ್ ಅನ್ನು ಸುಮ್ಮಸುಮ್ಮನೆ ಮಾಡುವುದಲ್ಲ. ವಾಕಿಂಗ್ ಸಹ ಒಂದು ಕಲೆ. ವಾಕಿಂಗ್ ಮಾಡುವಾಗ ನಿಮ್ಮ ಹೆಜ್ಜೆಗಳನ್ನು ಎಣಿಸಬೇಡಿ, ಸಮಯವನ್ನು ಎಣಿಸಿ. ನಡಿಗೆಯ ಸಮಯದಲ್ಲಿ ವಾಸ್ತವಿಕವಾಗಿ ಮುಖ್ಯವಾದುದು ನಡಿಗೆಯ ವೇಗ, ನಡೆಯುವ ಭಂಗಿ, ನಡೆಯುವ ವಿಧಾನ, ದಿನದ ಸಮಯ ಮತ್ತು ವಾತಾವರಣ.
ನಡಿಗೆಯ ವೇಗ (ಹಂತಗಳು ಮತ್ತು ಸಮಯ)
ವೇಗದ ನಡಿಗೆ ತೂಕ ಇಳಿಸಲು ಸಹಾಯ ಮಾಡುತ್ತದೆ. ವಯಸ್ಸಾದವರಿಗೆ ವೇಗದ ನಡಿಗೆ ಸಲಹೆ ನೀಡಿದ್ದರೂ, ಅದನ್ನು ಕ್ರಮೇಣ ಹೆಚ್ಚಿಸಬಹುದು. ಹೆಚ್ಚಿನ ವೇಗದಲ್ಲಿ ನಡೆಯಲು ನಿಮಗೆ ಸಮಸ್ಯೆಗಳಿದ್ದರೆ, ಅದನ್ನು ನಿಧಾನವಾಗಿ ಮೇಲಕ್ಕೆ ತನ್ನಿ. ನೀವು ನಡೆದಿರುವ ಹೆಜ್ಜೆಗಳ ಸಂಖ್ಯೆಯ ವಿರುದ್ಧ ಸಮಯದ ಅವಧಿಯನ್ನು ಗಮನಿಸಿ.
ಕೊಬ್ಬು ಕರಗುವ ಪ್ರಕ್ರಿಯೆಯ ಮೇಲೆ ದೈಹಿಕ ಚಟುವಟಿಕೆಯ ತೀವ್ರತೆಯ ಪ್ರಭಾವ ಇರುತ್ತದೆ. ವೇಗದ ನಡಿಗೆಯು ತೀವ್ರವಾದ ದೈಹಿಕ ಚಟುವಟಿಕೆಗಿಂತ ಕಡಿಮೆಯಿಲ್ಲ ಮತ್ತು ಅನೇಕ ತಜ್ಞರು ಸ್ಪೀಡ್ ವಾಕಿಂಗ್ ಹೊಟ್ಟೆಯ ಆಳವಾದ ಕೊಬ್ಬನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಎಂದು ಹೇಳುತ್ತಾರೆ.
ಇದನ್ನೂ ಓದಿ: ಅತಿಯಾಗಿ ತಿನ್ನೋದು ಎಷ್ಟು ಡೇಂಜರ್ ಗೊತ್ತಾ? ಈ ಅಭ್ಯಾಸ ತಪ್ಪಿಸಲು ಇಲ್ಲಿದೆ ಟಿಪ್ಸ್
ವಾಕಿಂಗ್ ಭಂಗಿ
ನೀವು ತೂಕ ಇಳಿಸುವುದನ್ನು ಮನಸ್ಸಿನಲ್ಲಿಟ್ಟುಕೊಂಡು ಆರಾಮವಾಗಿ ನಡೆಯಬೇಡಿ. ನೇರವಾದ ಭಂಗಿಯೊಂದಿಗೆ ನಡೆಯಿರಿ ಇದರಿಂದ ಇಡೀ ದೇಹದ ಸ್ನಾಯುಗಳು ಹಿಗ್ಗುತ್ತವೆ ಮತ್ತು ವ್ಯಕ್ತಿಯು ನಡೆಯುವಾಗ ತೀವ್ರವಾದ ಚಟುವಟಿಕೆಯಲ್ಲಿ ತೊಡಗುತ್ತವೆ.
ನಿಮ್ಮ ತೋಳುಗಳನ್ನು ಬೀಸಿ ನಡೆಯಬೇಕು ಮತ್ತು ಮುಂದೆ ಸಾಗಲು ದೀರ್ಘವಾದ ದಾಪುಗಾಲುಗಳನ್ನು ಹಾಕಬೇಕು. ನಿಮ್ಮ ಸ್ನೇಹಿತರ ಜೊತೆ ವಾಕಿಂಗ್ ಮಾಡುತ್ತಿದ್ದರೆ ಗಾಸಿಪ್‌ನಲ್ಲಿ ತೊಡಗಿಸಿಕೊಳ್ಳದೇ ಸರಿಯಾದ ರೀತಿ ನಡೆಯಿರಿ. ಮತ್ತು ವಾಕಿಂಗ್ ಮಾಡುವಾಗ ನಿಮ್ಮ ಉಸಿರಾಟದ ಮೇಲೆ ಕೇಂದ್ರೀಕರಿಸಿ.
ನಡೆಯುವ ವಿಧಾನ
ವಿರಾಮ ತೆಗೆದುಕೊಂಡು ಮಾಡುವ ವಾಕಿಂಗ್ ತೂಕವನ್ನು ಕಳೆದುಕೊಳ್ಳಲು ಸಹಕಾರಿಯಾಗುವುದಿಲ್ಲ. ನಡಿಗೆಯ ಪ್ರಯೋಜನಗಳನ್ನು ಪಡೆಯಲು, ಒಬ್ಬರು ಕನಿಷ್ಠ 20-30 ನಿಮಿಷಗಳ ಉತ್ತಮ ವಾಕಿಂಗ್ ಮಾಡಬೇಕು. ಪವರ್ ವಾಕ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಇಂತಹ ರೀತಿಯ ನಡಿಗೆಗಳು ವ್ಯಕ್ತಿಯು ಗಂಟೆಗೆ 4 ರಿಂದ 5 ಮೈಲುಗಳಷ್ಟು ನಡೆಯುವಾಗ ಪ್ರತಿ ಗಂಟೆಗೆ ಸರಿಸುಮಾರು 550 ಕ್ಯಾಲೊರಿಗಳನ್ನು ಕಳೆದುಕೊಳ್ಳುತ್ತಾನೆ ಎಂದು ಹೇಳಲಾಗುತ್ತದೆ.
ದಿನದ ವಾಕಿಂಗ್ ಸಮಯ ಮತ್ತು ವಾತಾವರಣ
ಬೆಳಿಗ್ಗೆ ತೀವ್ರವಾದ ದೈಹಿಕ ಚಟುವಟಿಕೆಯನ್ನು ಕೈಗೊಳ್ಳಲು ಯಾವಾಗಲೂ ಸಲಹೆ ನೀಡಲಾಗುತ್ತದೆ. ಮುಂಜಾನೆಯ ನಡಿಗೆಯು ಪರಿಸರದ ಶಾಂತತೆ ಮತ್ತು ಉತ್ತಮ ಗುಣಮಟ್ಟದ ಗಾಳಿಯಿಂದಾಗಿ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಇದಲ್ಲದೆ ಬೆಳಗಿನ ಸಮಯದಲ್ಲಿ, ಜನರಿಗೆ ಸಾಕಷ್ಟು ಸಮಯ ಇರುವುದರಿಂದ ಮಾರ್ನಿಂಗ್ ವಾಕನ್ನು ಶಿಫಾರಸ್ಸು ಮಾಡಲಾಗುತ್ತದೆ.
ಇದನ್ನೂ ಓದಿ: ವ್ಯಾಯಾಮವಿಲ್ಲದೆ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು! ಇಲ್ಲಿದೆ ಬೊಜ್ಜು ಕರಗಿಸೋ ಬೆಸ್ಟ್ ಟಿಪ್ಸ್
ಈ ಎಲ್ಲಾ ವಿಧಾನಗಳನ್ನು ಅನುಸರಿಸುವ ಮೂಲಕ ವಾಕಿಂಗ್ ಮಾಡಿದರೆ ನೀವು ನಿಮ್ಮ ತೂಕ ಇಳಿಕೆಯ ಗುರಿಯನ್ನು ಪರಿಣಾಮಕಾರಿಯಾಗಿ ತಲುಪಲು ಸಾಧ್ಯವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ
link