December 2, 2023
ಇಂದಿನ ದಿನಗಳಲ್ಲಿ (Now a Days) ಬಹುತೇಕರು ಹೆಚ್ಚುತ್ತಿರುವ ತೂಕದಿಂದ (Weight Gain) ಚಿಂತಿತರಾಗಿದ್ದಾರೆ. ತುಂಬಾ ಹೊತ್ತಿನವರೆಗೆ ಕಂಪ್ಯೂಟರ್ (Computer) ಮುಂದೆ ಕುಳಿತು ಕೆಲಸ ಮಾಡುವುದು, ಕೆಟ್ಟ ಜೀವನಶೈಲಿ (Bad Lifestyle), ಆಹಾರ ಪದ್ಧತಿ (Food) ಬೊಜ್ಜು (Obesity) ಹೆಚ್ಚುವಂತೆ ಮಾಡುತ್ತದೆ. ಹೀಗಾಗಿ ಜನರು ತಮ್ಮ ಬೊಜ್ಜಿನ ಬಗ್ಗೆ ಹೆಚ್ಚು ಚಿಂತೆ ಮಾಡುವಂತಾಗಿದೆ. ಸ್ಥೂಲಕಾಯ ಹೆಚ್ಚಿನ ರೋಗಗಳಿಗೆ ಮೂಲ ಕಾರಣ. ಹಾಗಾಗಿ ನೀವು ನಿಮ್ಮನ್ನು ಫಿಟ್ ಆಗಿ ಇರಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದರೆ ಆಹಾರ ಕ್ರಮದ ಬಗ್ಗೆ ಹೆಚ್ಚು ಗಮನ ಕೊಡಿ. ಮೊದಲು ನಿಮ್ಮ ತೂಕವನ್ನು ಕಡಿಮೆ ಮಾಡುವ ಬಗ್ಗೆ ಹೆಚ್ಚು ಗಮನಹರಿಸಿ. ತಪ್ಪು ಆಹಾರ ಪದ್ಧತಿ ತೂಕವನ್ನು ವೇಗವಾಗಿ ಹೆಚ್ಚಾಗುವಂತೆ ಮಾಡುತ್ತದೆ.

ದೇಹದಲ್ಲಿ ಅನೇಕ ಕಾಯಿಲೆ ಹೆಚ್ಚುವಂತೆ ಮಾಡುತ್ತದೆ ಬೊಜ್ಜು

ಸ್ಥೂಲಕಾಯ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಅನೇಕ ರೀತಿಯ ಮೂತ್ರಪಿಂಡದ ಕಾಯಿಲೆಗಳು ಸಂಭವಿಸಲು ಶುರು ಆಗುತ್ತವೆ. ಆಹಾರ ಕ್ರಮದಲ್ಲಿ ರುಚಿಯಿಲ್ಲದ ಮತ್ತು ಅತಿ ಕಡಿಮೆ ಪ್ರಮಾಣದ ಆಹಾರ ಸೇವನೆ ಮಾಡಬೇಕು.

ಇದಕ್ಕಾಗಿ ನಿಮ್ಮ ದಿನಚರಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕು. ಹಾಗಿದ್ದರೆ ಒಂದು ದಿನದಲ್ಲಿ ಒಂದು ಕೆಜಿ ತೂಕ ಕಳೆದುಕೊಳ್ಳುವುದು ಹೇಗೆ ಎಂದು ಇಲ್ಲಿ ನೋಡೋಣ.

ಇದನ್ನೂ ಓದಿ: ನಿಮ್ಮ ಆಹಾರದಲ್ಲಿ ಈ ಪದಾರ್ಥಗಳಿದ್ದರೆ ಹೃದಯದ ಆರೋಗ್ಯಕ್ಕೆ ಬೆಸ್ಟ್ ಅಂತೆ!

ಸಿಹಿ ಪದಾರ್ಥ ಸೇವನೆ ನಿಲ್ಲಿಸಿ

ತೂಕ ಇಳಿಸಲು ಮೊದಲು ಸಿಹಿ ಪದಾರ್ಥ ಸೇವನೆ ತ್ಯಜಿಸಿ. ಇದು ಸ್ಥೂಲಕಾಯ ಕಡಿಮೆ ಮಾಡಲು, ನೀವು ಸಿಹಿತಿಂಡಿಗಳು ಮತ್ತು ಚಾಕೊಲೇಟ್‌ಗಳಿಂದ ದೂರವಿರಿ. ಸಿಹಿತಿಂಡಿ ಸೇವನೆಯಿಂದ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ ಮತ್ತು ತೂಕ ಹೆಚ್ಚಾಗುತ್ತದೆ.

ಉತ್ತಮ ಪ್ರಮಾಣದ ಪ್ರೋಟೀನ್ ಯುಕ್ತ ಪದಾರ್ಥಗಳ ಸೇವನೆ ಮಾಡಿ

ಸ್ಥೂಲಕಾಯ ಕಡಿಮೆ ಮಾಡಲು ನೀವು ದಿನವಿಡೀ ಉತ್ತಮ ಪ್ರಮಾಣದ ಪ್ರೋಟೀನ್ ಸೇವನೆ ಮಾಡಿ. ನಿಮ್ಮ ಆಹಾರದಲ್ಲಿ ಹೆಚ್ಚು ಪನೀರ್, ಮೊಸರು, ಕಾಳು ಮತ್ತು ಕಿಡ್ನಿ ಬೀನ್ಸ್ ಅನ್ನು ಸೇವಿಸಿ. ಪ್ರೋಟೀನ್ ಹಸಿವು ಕಡಿಮೆ ಮಾಡಲು ಸಹಕಾರಿ.

ಗ್ರೀನ್ ಟೀ ಕುಡಿಯಿರಿ

ನಿಮ್ಮ ಮೆಟಾಬಾಲಿಸಂ ಉತ್ತಮವಾಗಿದ್ದರೆ ನಿಮ್ಮ ತೂಕ ಹೆಚ್ಚಾಗುವುದಿಲ್ಲ. ಹಸಿರು ಚಹಾವನ್ನು 2-3 ಬಾರಿ ಕುಡಿಯಬೇಕು. ಗ್ರೀನ್ ಟೀ ನಿಮ್ಮ ಕೊಬ್ಬನ್ನು ವೇಗವಾಗಿ ಸುಡುತ್ತದೆ.

ದಿನನಿತ್ಯದ ವ್ಯಾಯಾಮ

ತೂಕ ಇಳಿಸಿಕೊಳ್ಳಲು ವ್ಯಾಯಾಮ ಮಾಡಿ. ಪ್ರತಿದಿನ ನಡೆಯಿರಿ ಮತ್ತು ಜಾಗಿಂಗ್ ಮಾಡಿ. ಮನೆಯಲ್ಲಿ ಮೆಟ್ಟಿಲು ಹತ್ತುವುದನ್ನು ರೂಢಿಸಿಕೊಳ್ಳಿ. ಹೆಚ್ಚು ಹೊತ್ತು ಕುಳಿತು ಕೆಲಸ ಮಾಡಬೇಡಿ. ಇದು ನಿಮ್ಮ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ.

ಬೆಚ್ಚಗಿನ ನೀರು ಕುಡಿಯಿರಿ

ದೇಹದಿಂದ ವಿಷ ತೆಗೆದು ಹಾಕಲು ಸಾಕಷ್ಟು ನೀರು ಕುಡಿಯಿರಿ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ನೀವು ಪ್ರತಿದಿನ ಬಿಸಿ ನೀರನ್ನು ಕುಡಿಯಬೇಕು. ಇದು ನಿಮ್ಮ ದೇಹವನ್ನು ನಿರ್ವಿಷಗೊಳಿಸುತ್ತದೆ ಮತ್ತು ಚಯಾಪಚಯವು ವೇಗವಾಗಿರುತ್ತದೆ.

ತೂಕ ಇಳಿಸಿಕೊಳ್ಳಲು ಸುಲಭ ಸಲಹೆ

ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ 1-2 ಲೋಟ ನೀರು ಕುಡಿಯಿರಿ. ಊಟಕ್ಕೆ ಅರ್ಧ ಗಂಟೆ ಮೊದಲು ನೀರು ಕುಡಿಯಿರಿ. ಇದರಿಂದ ಹೆಚ್ಚು ಆಹಾರ ಸೇವಿಸುವ ಬಯಕೆ ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಮಹಿಳೆಯರಲ್ಲಿ ಪದೇ ಪದೇ ಮೂತ್ರನಾಳ ಸೋಂಕು ಉಂಟಾಗಲು ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ಹೆಚ್ಚು ಎಣ್ಣೆಯುಕ್ತ ವಸ್ತುಗಳು, ಬರ್ಗರ್, ಪಿಜ್ಜಾ, ಚೀಸ್ ಇತ್ಯಾದಿ ಸೇವನೆ ತಪ್ಪಿಸಿ. ಹೆಚ್ಚು ತರಕಾರಿ, ಸಲಾಡ್‌ ಸೇವಿಸಿ. ಇದು ನಿಮ್ಮ ದೇಹವನ್ನು ಆರೋಗ್ಯವಾಗಿರಿಸುತ್ತದೆ.

ನಿಧಾನವಾಗಿ ನೆಲದ ಮೇಲೆ ಕುಳಿತು ಊಟ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಇದು ಆಹಾರವನ್ನು ಜೀರ್ಣಿಸಲು ಸಹಕಾರಿ.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

link

Leave a Reply

Your email address will not be published. Required fields are marked *