
1. ಲಿಂಬೆ ರಸ ಮತ್ತು ಜೇನು ತುಪ್ಪ
ಲಿಂಬೆ ರಸ, ಸನ್ ಟ್ಯಾನ್ ತೆಗೆಯುವ ನೈಸರ್ಗಿಕ ಬ್ಲಿಚಿಂಗ್ ಏಜೆಂಟ್ ಆಗಿದೆ. ಅದಕ್ಕಾಗಿ ನೀವು ಮಾಡಬೇಕಾದದ್ದಿಷ್ಟೆ, ತಾಜಾ ಲಿಂಬೆ ಹಣ್ಣಿನ ರಸ ತೆಗೆದುಕೊಂಡು, ಅದಕ್ಕೆ ಒಂದು ಟೇಬಲ್ ಚಮಚ ಜೇನು ತುಪ್ಪ ಸೇರಿಸಿ. ಬೇಕಿದ್ದರೆ, ಈ ಮಿಶ್ರಣಕ್ಕೆ ಸಕ್ಕರೆಯನ್ನು ಸೇರಿಸಿ, ಚರ್ಮದ ಮೇಲೆ ನಿಧಾನಕ್ಕೆ ಸ್ಕ್ರಬ್ ಕೂಡ ಮಾಡಬಹುದು. 20-30 ನಿಮಿಷಗಳ ಕಾಲ ಅದನ್ನು ಮುಖದ ಮೇಲೆ ಹಾಗೆಯೇ ಒಣಗಲು ಬಿಡಿ, ಬಳಿಕ ತೊಳೆದು ತೆಗೆಯಿರಿ.
2. ಕಡಲೇಹಿಟ್ಟು , ಅರಶಿನ ಮತ್ತು ಮೊಸರು
ಕಡಲೇ ಹಿಟ್ಟು, ಚರ್ಮದ ಬಣ್ಣಕ್ಕೆ ಕಾಂತಿ ನೀಡುತ್ತದೆ ಮತ್ತು ಅರಶಿನ ಚರ್ಮಕ್ಕೆ ಹೊಳಪು ನೀಡುವ ಗುಣವನ್ನು ಹೊಂದಿದೆ. ಮೊಸರಿನಲ್ಲಿ ಇರುವ ಲ್ಯಾಕ್ಟಿಕ್ ಏಜೆಂಟ್ ನಿಮ್ಮ ಚರ್ಮವನ್ನು ಮೃದುವಾಗಿಸುತ್ತದೆ. ಮೊಸರು, ಅರಶಿನ ಮತ್ತು ಮೊಸರನ್ನು ಸೇರಿಸಿ ಒಂದು ಮಿಶ್ರಣವನ್ನು ತಯಾರಿಸಿ ಮತ್ತು ಅದನ್ನು ನಿಮ್ಮ ಚರ್ಮದ ಮೇಲೆ ಹಚ್ಚಿರಿ. 15 ನಿಮಿಷ ಒಣಗಲು ಬಿಡಿ, ಅದನ್ನು ತೊಳೆದು ತೆಗೆಯುವಾಗ ನಿಧಾನಕ್ಕೆ ಸ್ಕ್ರಬ್ ಮಾಡಿ.
3. ಪಪ್ಪಾಯ, ಟೊಮ್ಯಾಟೋ, ಕಲ್ಲಂಗಡಿ ಹಣ್ಣು, ಆಲೂಗಡ್ಡೆ ಮತ್ತು ಸೌತೆಕಾಯಿ
ಪಪ್ಪಾಯದಲ್ಲಿ, ಎಕ್ಸ್‌ಫೋಲಿಯೇಟಿಂಗ್ ಅಂಶಗಳು ಹೇರಳವಾಗಿವೆ ಮತ್ತು ನೈಸರ್ಗಿಕ ಕಿಣ್ವಗಳಿವೆ. ಅದು ಒಂದು ಉತ್ತಮ ನೈಸರ್ಗಿಕ ಬ್ಲೀಚಿಂಗ್ ಕೂಡ ಹೌದು. ಆಲೂಗಡ್ಡೆ ರಸವು ಕೂಡ ಬ್ಲೀಚಿಂಗ್ ಏಜೆಂಟ್ ಆಗಿದ್ದು, ಕಣ್ಣಿನ ಸುತ್ತ ಇರುವ ಕಪ್ಪು ವರ್ತುಲಗಳನ್ನು ಮಂದಗೊಳಿಸುತ್ತದೆ. ಟೊಮ್ಯಾಟೋ ಆ್ಯಂಟಿ ಆಕ್ಸಿಡೆಂಟ್‍ಗಳನ್ನು ಗುಣಗಳನ್ನು ಹೊಂದಿದೆ ಮತ್ತು ಅದು ಚರ್ಮಕ್ಕೆ ಉತ್ತಮ ಕಾಂತಿ ನೀಡಬಲ್ಲದು. ಸೌತೆಕಾಯಿ ಒಂದು ಸೇನ್ಸೆಶನಲ್ ಕೂಲಿಂಗ್ ಏಜೆಂಟ್ ಆಗಿದ್ದು, ಟ್ಯಾನ್ ನಿವಾರಣೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Weight Loss: ತೂಕ ಇಳಿಸಲು ಬಯಸುವವರು ಈ 5 ತಪ್ಪುಗಳನ್ನು ಮಾಡಲೇಬೇಡಿ
ಪಪ್ಪಯಾ ಹಣ್ಣು, ಕಲ್ಲಂಗಡಿ ಹಣ್ಣು, ಆಲೂಗಡ್ಡೆ, ಟೊಮ್ಯಾಟೋ ಮತ್ತು ಸೌತೆಕಾಯಿಯ 4-5 ತುಂಡುಗಳನ್ನು ತೆಗೆದುಕೊಂಡು, ಅದನ್ನು ನುಣ್ಣಗೆ ರುಬ್ಬಿಕೊಳ್ಳಿ. ಆ ಪೇಸ್ಟ್ ಅನ್ನು 15 ನಿಮಿಷಗಳ ಕಾಲ ಫ್ರಿಡ್ಜ್‍ನಲ್ಲಿ ಇಡಿ. ಬಳಿಕ ಅದನ್ನು ಚರ್ಮದ ಮೇಲೆ ಹಚ್ಚಿ ಮತ್ತು ಚರ್ಮ ಅದನ್ನು ಹೀರಿಕೊಳ್ಳುವ ವರೆಗೆ ಉಜ್ಜುತ್ತಿರಿ.
4. ಬೇಳೆ, ಅರಸಿನ ಮತ್ತು ಹಾಲು
ಬೇಳೆ (ಮಸೂರ್ ಬೇಳೆ) ಯನ್ನು ರಾತ್ರಿ ಇಡೀ ಹಸಿ ಹಾಲಿನಲ್ಲಿ ನೆನೆಸಿಡಿ. ನೆನೆಸಿಟ್ಟ ಬೆಳೆಯನ್ನು ಅರಸಿನ ಹಾಕಿ ರುಬ್ಬಿಕೊಳ್ಳಿ. ಅದನ್ನು ಚರ್ಮಕ್ಕೆ ಹಾಕಿ ಒಣಗುವ ವರೆಗೆ ಬಿಡಿ. ಬಳಿಕ ತೊಳೆದು ತೆಗೆಯಿರಿ.
5. ಕಾಫಿ , ತೆಂಗಿನ ಎಣ್ಣೆ ಮತ್ತು ಸಕ್ಕರೆ
ಕೆಫಿನ್‍ನ ಉತ್ತಮ ಗುಣಗಳನ್ನು ಹೊಂದಿರುವ, ಕಾಫಿಯಲ್ಲಿ ಚರ್ಮಕ್ಕೆ ಉಪಯೋಗ ಆಗುವ ಅನೇಕ ಅಂಶಗಳಿವೆ. ಅದು ಚರ್ಮದ ಟ್ಯಾನ್ ತೆಗೆಯಲು ಸಹಾಯ ಮಾಡುವುದು ಮಾತ್ರವಲ್ಲ, ಮೊಡವೆಗಳನ್ನು ಕೂಡ ನಿವಾರಣೆ ಮಾಡುತ್ತದೆ. ತೆಂಗಿನ ಎಣ್ಣೆ ಚರ್ಮವನ್ನು ಮಾಯಿಶ್ಚರೈಸ್ ಮಾಡುತ್ತದೆ. ಕಾಫಿ ಪೌಡರ್, ತೆಂಗಿನ ಎಣ್ಣೆ ಮತ್ತು ಸಕ್ಕರೆ ಸೇರಿಸಿ ಒಂದು ದಪ್ಪ ಪೇಸ್ಟ್ ತಯಾರಿಸಿ. ಆ ಪೇಸ್ಟ್ ನಿಂದ ಚರ್ಮದ ಮೇಲೆ 10 ನಿಮಿಷ ಸ್ಕ್ರಬ್ ಮಾಡಿ. 10 ನಿಮಿಷ ಒಣಗಲು ಬಿಟ್ಟು, ಬಳಿಕ ತೊಳೆದು ತೆಗೆಯಿರಿ.
ಇದನ್ನೂ ಓದಿ: Washing Tips: ಕೆಚಪ್ ಬಿದ್ದು ಬಟ್ಟೆಯಲ್ಲಿ ಕಲೆಯಾಗಿದ್ಯಾ? ಹೀಗೆ ಮಾಡಿದ್ರೆ 5 ನಿಮಿಷದಲ್ಲಿ ಕಲೆ ಮಾಯವಾಗುತ್ತೆ ನೋಡಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ
link