
1) ಉತ್ತಮ ಪೋಷಣೆಯುಳ್ಳ ಆಹಾರ
ಫಿಟ್ ಆಗಿರಲು ಉತ್ತಮ ಪೋಷಣೆಯುಳ್ಳ ಆಹಾರವು ಮುಖ್ಯವಾಗುತ್ತದೆ. ತರಕಾರಿಗಳು, ಪ್ರೋಟೀನ್, ಮೀನು, ಕಡಿಮೆ-ಕೊಬ್ಬಿನ ಡೈರಿ ಮತ್ತು ಶುದ್ಧ ಆಹಾರಗಳನ್ನು ಸೇವಿಸುವುದು ಉತ್ತಮ. ಧಾನ್ಯಗಳು, ಹಸಿರು ಎಲೆಗಳ ತರಕಾರಿಗಳು, ಆವಕಾಡೊಗಳು, ಆಲಿವ್ ಎಣ್ಣೆ ಇತ್ಯಾದಿಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಬಳಸಿ. ಆದಷ್ಟು ಸಕ್ಕರೆ ಅಂಶವುಳ್ಳ ಆಹಾರಗಳು, ಪಾನೀಯಗಳನ್ನು ಕಡಿಮೆ ಮಾಡಿ ಎನ್ನುತ್ತಾರೆ ಪೌಷ್ಟಿಕತಜ್ಞ ವಂಶ್.
2) ಅಗತ್ಯವಿದ್ದಾಗ ಮಾತ್ರ ತಿನ್ನಿ
ನಿಮಗೆ ಬೇಕು ಬೇಕೆಂದಾಗ ತಿನ್ನುವ ಅಭ್ಯಾಸವಿದ್ದರೆ ಅದನ್ನು ಈಗಾಲೇ ಬಿಟ್ಟು ಬಿಡಿ. ಇದರಿಂದ ನಿಮ್ಮ ದೇಹದ ಫಿಟ್ನೆಸ್ ಕಾಯ್ದುಕೊಳ್ಳಲು ಸಾಧ್ಯವಿಲ್ಲ. ನೀವು ಅತಿಯಾಗಿ ತಿಂದರೆ ಅದು ನಿಮ್ಮ ಹಸಿವಿನ ಪ್ರಗತಿಗೆ ಅಡ್ಡಿಯಾಗುತ್ತದೆ. ಹೀಗಾಗಿ ನಿಮ್ಮ ದೇಹಕ್ಕೆ ಯಾವಾಗ ಆಹಾರ ಬೇಕನಿಸುತ್ತದೆಯೋ ಆವಾಗ ಮಾತ್ರ ತಿನ್ನಿ.
ಇದನ್ನೂ ಓದಿ: Weight Loss Tips: ತೂಕ ಇಳಿಸಲು ಯಾವ ಹಣ್ಣು ತಿನ್ಬೇಕು? ಯಾವ್ದು ತಿನ್ಬಾರ್ದು? ಇಲ್ಲಿದೆ ನೋಡಿ ಲಿಸ್ಟ್
3) ತೀವ್ರ ನಿರ್ಬಂಧಗಳನ್ನು ತಪ್ಪಿಸಿ
ನಿಮ್ಮ ದೇಹ ಯಾವುದನ್ನು ಪ್ರೀತಿಸುತ್ತದೆಯೋ ಅದನ್ನು ಕಟ್ಟುನಿಟ್ಟಾಗಿ ದೂರವಿಡುವುದು ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಹುದು. ಇದನ್ನು ಎದುರಿಸಲು, ಮಿತವಾಗಿ ತಿನ್ನಿರಿ ಮತ್ತು ತಪ್ಪಿತಸ್ಥ ಭಾವನೆಯನ್ನು ದೂರ ಮಾಡಿ. ನಿಮಗೆ ಇಷ್ಟವಿರುವ ಆಹಾರವನ್ನು ಹೆಚ್ಚು ನಿರ್ಬಂಧಿಸುತ್ತಾ ಹೋದರೆ, ಅದನ್ನು ಉಳಿಸಿಕೊಳ್ಳುವುದು ಹೆಚ್ಚು ಕಷ್ಟ.
4) ಫಿಟ್ನೆಸ್ ಪ್ರಗತಿ
ಒಂದು ರೀತಿಯ ವ್ಯಾಯಾಮದಿಂದ ಇನ್ನೊಂದಕ್ಕೆ ಪರಿವರ್ತನೆಯನ್ನು ಅಭ್ಯಾಸ ಮಾಡಿಕೊಳ್ಳಿ. ಕಡಿಮೆ-ಮಧ್ಯಮ ವರ್ಕ್ಔಟ್ಗಳು ಮತ್ತು ಕಡಿಮೆ ಅವಧಿಗಳೊಂದಿಗೆ ಮೊದಲಿಗೆ ಪ್ರಾರಂಭಿಸಿ. ನಂತರ ಕ್ರಮೇಣವಾಗಿ ಹೆಚ್ಚಿನ ತೀವ್ರತೆಯ ಕಾರ್ಡಿಯೋಗಳನ್ನು ಮಾಡುತ್ತಾ ಹೋಗಿ. ಓಟ, ಸೈಕ್ಲಿಂಗ್, ಈಜು, ಭಾರ ಎತ್ತುವುದು ಮುಂತಾದ ಕೆಲವನ್ನು ಮೈಗೂಡಿಕೊಳ್ಳಿ.
5) ನಿಮ್ಮ ಚಟುವಟಿಕೆಯ ಗುರಿಯನ್ನು ಸಾಧಿಸಿ
ನೀವು ನಿಮ್ಮ ದೈನಂದಿನ ಚಟುವಟಿಕೆಯಲ್ಲಿ ಗುರಿಯನ್ನು ಮುರಿಯುವುದನ್ನು ಮರೆಯಬೇಡಿ. ವಾಸ್ತವಿಕ ಮತ್ತು ಸಮಯಕ್ಕೆ ಸೀಮಿತವಾದ ನಿರ್ದಿಷ್ಟ, ಸಾಧಿಸಬಹುದಾದ, ಅಳೆಯಬಹುದಾದ ವ್ಯಾಯಮಗಳನ್ನು ಮಾಡಿ. ಫಿಟ್ನೆಸ್ನ ನಿಮ್ಮ ಅಂತಿಮ ಗುರಿಯನ್ನು ಸಾಧಿಸುವ ಪ್ರಕ್ರಿಯೆಯನ್ನು ಆನಂದಿಸಿ ಮತ್ತು ಪ್ರತಿ ಹಂತದಲ್ಲೂ ನಿಮ್ಮ ಪ್ರಗತಿಯನ್ನು ದಾಖಲಿಸಿ.
MyHealthBuddy ಯ ಆರೋಗ್ಯ ತರಬೇತುದಾರ ಗೌರವ್ ಬನ್ಸಾಲ್ ಹೇಳುವ ಪ್ರಕಾರ, “ಆರೋಗ್ಯ ಮತ್ತು ಫಿಟ್ನೆಸ್ನ ಈ ಅಗಾಧ ಪ್ರಪಂಚದೊಳಗೆ ಎಲ್ಲಾ ಉನ್ನತ ಫಿಟ್ನೆಸ್ ಗುರುಗಳು ಒಪ್ಪುವಂತೆ ತೋರುವ ಸತ್ಯಗಳು, ಪುರಾವೆ ಆಧಾರಿತ ಮಾಹಿತಿ ಮತ್ತು ಡೇಟಾದ ಒಂದು ಸಣ್ಣ ಪ್ರಪಂಚವಿದೆ. ನೀವು ಈಗಾಗಲೇ ಇದನ್ನು ತಿಳಿದಿರುವಿರಿ. ಆದರೆ ಇದು ನಿಯಮಿತವಾಗಿ ವ್ಯಾಯಾಮ ಮಾಡುವುದು, ಆರೋಗ್ಯಕರವಾದ ಆಹಾರ ತಿನ್ನುವುದು, ಚೆನ್ನಾಗಿ ನಿದ್ದೆ ಮಾಡುವುದು ಮತ್ತು ಚೇತರಿಕೆಗೆ ಆದ್ಯತೆ ನೀಡುವುದರೊಂದಿಗೆ ಪ್ರಾರಂಭವಾಗುತ್ತದೆ.
ಇದನ್ನೂ ಓದಿ: Weight Loss: ತೂಕ ಇಳಿಸಿಕೊಳ್ಳಲು ಹಾಗೂ ಕೈಗಳ ಬೊಜ್ಜು ಕರಗಿಸಲು ಬೆಸ್ಟ್ ಟಿಪ್ಸ್
ನೀವು ಇದನ್ನು ಕರಗತ ಮಾಡಿಕೊಂಡಿದ್ದರೆ, ನಿಮ್ಮ ಆರೋಗ್ಯ ಪ್ರಯಾಣವು ಅರ್ಧದಾರಿಯಲ್ಲೇ ಇರುತ್ತದೆ. ಉಳಿದ ಅರ್ಧವು ವರ್ತನೆಯಾಗಿರುತ್ತದೆ. ವಾರದ ಪ್ರತಿ ದಿನವೂ ವರ್ಕೌಟ್ ಮಾಡುವುದು ಶ್ಲಾಘನೀಯ ಇದನ್ನು ಮೈಗೂಡಿಸಿಕೊಳ್ಳಿ” ಎನ್ನುತ್ತಾರೆ.
6) ಪೋಷಣೆ
ಫಿಟ್ ನೆಸ್ ಪ್ರಯಾಣದಲ್ಲಿ ಕೆಲವರು ಪೌಷ್ಟಿಕಾಂಶವನ್ನು ತಿರಸ್ಕರಿಸುತ್ತಾರೆ. ನೀವು ಊಟವನ್ನು ಬಿಟ್ಟರೆ ಅದು ನಿಮ್ಮ ಪೋಷಣೆಗೆ ಖಂಡಿತ ಸೂಕ್ತವಲ್ಲ. ಪ್ರತಿ ಊಟದ ಮೂಲಕ ನಿಮ್ಮ ಮ್ಯಾಕ್ರೋ ಮತ್ತು ಮೈಕ್ರೋನ್ಯೂಟ್ರಿಯಂಟ್ಗಳನ್ನು ಪೂರ್ಣಗೊಳಿಸಿಕೊಳ್ಳುವುದರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ನಿಮ್ಮ ಊಟದಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್, ಕೊಬ್ಬುಗಳು, ಕಾರ್ಬೋಹೈಡ್ರೇಟ್ಗಳು, ಫೈಬರ್ ಇರುವಂತೆ ನೋಡಿಕೊಳ್ಳುವುದು ಅತ್ಯಗತ್ಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ
link