
ನೀವು ತೂಕ ಇಳಿಕೆಗೆ ಪ್ರಯತ್ನಿಸುವಾಗ ಕೆಲವೊಂದು ಆರೋಗ್ಯಕರ ಟಿಪ್ಸ್ (Healthy Tips) ಬೇಗನೆ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತೆ, ಅಂಥದ್ದೇ ಟಿಪ್ಸ್ ಬಗ್ಗೆ ಇಲ್ಲಿ ಹೇಳಲಾಗಿದೆ. ಹೌದು ಒಣದ್ರಾಕ್ಷಿ(Dry grapes) ಹಾಗೂ ಬೆಲ್ಲ (Jaggery) ತಿನ್ನುವುದರಿಂದ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಬಹುದು.
ತೂಕ ಇಳಿಸಲು ಬೆಲ್ಲ ಹಾಗೂ ಒಣದ್ರಾಕ್ಷಿಯನ್ನು ಹೇಗೆ ಬಳಸುವುದು
ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ನೀರಿನಲ್ಲಿ 5 ರಿಂದ 6 ಒಣ ದ್ರಾಕ್ಷಿ ನೆನೆಹಾಕಿ ಮುಚ್ಚಿಡಿ. ಬೆಳಗ್ಗೆ ಅದಕ್ಕೆ ಸಣ್ಣ ಬೆಲ್ಲದ ತುಂಡುಗಳನ್ನು ಹಾಕಿ ಸೇವಿಸಬೇಕು. ಆದರೆ ಈ ನೀರು ಸೇವಿಸುವ ಮುನ್ನ ಒಂದು ಚಿಕ್ಕ ತುಂಡು ಬೆಲ್ಲವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ನಂತರ ಬೆಲ್ಲ ಹಾಗೂ ದ್ರಾಕ್ಷಿಯ ನೀರು ಕುಡಿಯಬೇಕು. ಹೀಗೆ ಮಾಡುವುದರಿಂದ ನಿಮ್ಮ ಚಯಪಚಯ ಕ್ರಿಯೆ ಆರೋಗ್ಯಕರವಾಗುವುದು. ಮೈ ತೂಕ ಕಡಿಮೆಯಾಗಬೇಕೆಂದರೆ ಚಯ ಪಚಯ ಕ್ರಿಯೆ ಉತ್ತಮವಾಗಬೇಕು. ಆದ್ದರಿಂದ ಈ ಟಿಪ್ಸ್ ಬಳಸಿದರೆ ಅಧಿಕ ಮೈ ತೂಕ ಸುಲಭದಲ್ಲಿ ಇಳಿಸಬಹುದು.
ಈ ಅಭ್ಯಾಸವನ್ನು ಎಷ್ಟು ಸಮಯ ಮಾಡಬೇಕು
ಬೆಲ್ಲ ಹಾಗೂ ಒಣದ್ರಾಕ್ಷಿಯ ಸೇವನೆ ದಿನವೂ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದೆ ಹೊರತು ಅಡ್ಡಪರಿಣಾಮವಿಲ್ಲ. ಏಕೆಂದರೆ ದಿನಾ 4-5 ದ್ರಾಕ್ಷಿ ನೆನೆ ಹಾಕಿ ತಿನ್ನುವ ಅಬ್ಯಾಸ ಜೀರ್ಣಕ್ರಿಯೆಗೆ ಉತ್ತಮ, ಇನ್ನು ನೈಸರ್ಗಿಕವಾದ ಬೆಲ್ಲ ಶಕ್ತಿಯನ್ನು ತುಂಬುವುದು. ಅಷ್ಟೇ ಮಾತ್ರವಲ್ಲ ಇವೆರಡರ ಮಿಶ್ರಣ ಸೇವಿಸುವುದರಿಂದ ರಕ್ತದೊತ್ತಡ ಕಡಿಮೆಯಾಗುವುದು ಉಸಿರಾಟದ ಸಮಸ್ಯೆಯಿದ್ದರೆ ಅದು ಕಡಿಮೆಯಾಗುವುದು, ಮೂಳೆಗಳು ಬಲವಾಗುವುದು, ಜೊತೆಗೆ ನೀವು ಬಯಸಿದಂತೆ ಆರೋಗ್ಯಕರ ತೂಕಕ್ಕೆ ಮರಳಬಹುದು.
ಇದನ್ನೂ ಓದಿ: Mango Benefits: ನಿಮಗೆ ವಯಸ್ಸಾಗುವುದನ್ನು ತಡೆಯುತ್ತಾ ಮಾವಿನಹಣ್ಣು? ‘ಹಣ್ಣುಗಳ ರಾಜ’ನಬಗ್ಗೆ ತಜ್ಞರು ಹೇಳುವುದೇನು?
ಬೆಲ್ಲ ಹಾಗೂ ಒಣದ್ರಾಕ್ಷಿಯಲ್ಲಿರುವ ಪೋಷಕಾಂಶಗಳು
ಬೆಲ್ಲ ತಿನ್ನುವುದರಿಂದ ವಿಟಮಿನ್ ಬಿ 12, ಬಿ 3, ಪೋಲೆಟ್, ಕ್ಯಾಲ್ಸಿಯಂ, ಕಬ್ಬಿಣದಂಶ, ರಂಜಕ, ಮೆಗ್ನಿಷ್ಯಿಯಂ, ಮ್ಯಾಂಗನೀಸ್ ಮುಂತಾದ ಪೋಷಕಾಂಶಗಳು ದೊರೆಯುವುದು. ಒಣದ್ರಾಕ್ಷಿಯಲ್ಲಿ ವಿಟಮಿನ್ ಬಿ, ವಿಟಮಿನ್ ಸಿ, ಕಬ್ಬಿಣದಂಶ ಇರುವುದರಿಂದ ರಕ್ತ ಹೀನತೆ, ಮಲ ಬದ್ಧತೆ ಸಮಸ್ಯೆಯಿನ ಪಾರಾಗಬಹುದು.
ಮಧುಮೇಹಿಗಳು ಈ ಟಿಪ್ಸ್ ಫಾಲೋ ಮಾಡಬಹುದೇ?
ಬೆಲ್ಲ ಸಕ್ಕರೆಯಂತೆ ಹಾನಿಕಾರಕವಲ್ಲ, ಆದರೆ ಮಧುಮೇಹಿಗಳು ದಿನಾ ಬೆಲ್ಲವನ್ನು ತಿನ್ನುವಂತಿಲ್ಲ ಅಪರೂಪಕ್ಕೆ ಸೇವಿಸಿದರೆ ಆರೋಗ್ಯಕ್ಕೇನೂ ಸಮಸ್ಯೆಯಾಗುವುದಿಲ್ಲ. 10ಗ್ರಾಂ ಬೆಲ್ಲದಲ್ಲಿ ಶೇ.65ರಿಂದ 85ರಷ್ಟು ಸುಕ್ರೋಸ್ ಇರುತ್ತದೆ. ಆದ್ದರಿಂದ ಮಧುಮೇಹಿಗಳು ತೂಕ ಇಳಿಕೆಗೆ ಈ ಟಿಪ್ಸ್ ಬಳಸುವುದು ಸೂಕ್ತವಲ್ಲ.
ಇದನ್ನೂ ಓದಿ: Hair Fall Tips: ರೇಷ್ಮೆಯಂತೆ ಹೊಳೆಯುತ್ತಿದ್ದ ನಿಮ್ಮ ಕೂದಲು ಹೆರಿಗೆ ಬಳಿಕ ಉದುರುತ್ತಿದೆಯಾ? ಚಿಂತೆ ಬೇಡ, ಇಲ್ಲಿದೆ ಪರಿಹಾರ
ಬೆಲ್ಲ ಮತ್ತು ದ್ರಾಕ್ಷಿ ನೀರಿನ ಸೇವನೆ ಜೊತೆ ವ್ಯಾಯಾಮ
ನೀವು ತೂಕ ಇಳಿಕೆ ಬರೀ ಒಣ ದ್ರಾಕ್ಷಿ ಹಾಗೂ ಬೆಲ್ಲದ ನೀರು ಕುಡಿದರೆ ಸಾಕಾಗುವುದಿಲ್ಲ. ದಿನಾ 30 ನಿಮಿಷ ವ್ಯಾಯಾಮ ಮಾಡಬೇಕು, ಆರೋಗ್ಯಕರ ಆಹಾರಕ್ರಮ ಸೇವಿಸಬೇಕು. ಒಣ ದ್ರಾಕ್ಷಿ ಮತ್ತು ಬೆಲ್ಲದ ನೀರು ನಿಮ್ಮ ತೂಕ ಇಳಿಕೆಯ ಪ್ರಯತ್ನಕ್ಕೆ ಮತ್ತಷ್ಟು ಫಲ ನೀಡುವುದು. ಇದು ಹೊಟ್ಟೆ ಬೊಜ್ಜು ಕರಗಿಸಲು ಸಹಾಯ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ
link