
ರುಚಿ ಮತ್ತು ಅತ್ಯಧಿಕ ಪೌಷ್ಟಿಕಾಂಶ ಹೊಂದಿರುವ ಈ ಹಣ್ಣು
ಬೇಲದ ಹಣ್ಣು, ಅತ್ಯಧಿಕ ಫೈಬರ್, ಪ್ರೋಟೀನ್‍ಗಳು, ಬೇಟಾ -ಕ್ಯಾರೋಟಿನ್ಸ್, ರೈಬೋಫ್ಲಾವಿನ್ ಮತ್ತು ವಿಟಮಿನ್ ಸಿ ಯನ್ನು ಹೊಂದಿದ್ದು, ಅತ್ಯಂತ ರುಚಿಕರವಾಗಿರುತ್ತದೆ. ಹಾಗಾಗಿ, ರುಚಿ ಮತ್ತು ಅತ್ಯಧಿಕ ಪೌಷ್ಟಿಕಾಂಶ ಹೊಂದಿರುವ ಈ ಹಣ್ಣು, ಬೇಸಿಗೆಯ ಋತುವಿಗೆ ಪರಿಪೂರ್ಣ ಹಣ್ಣು ಮಾತ್ರವಲ್ಲ, ಪ್ರಕೃತಿ ಮನುಷ್ಯನ ಆರೋಗ್ಯಕ್ಕೆಂದು ನೀಡಿರುವ ವರದಾನ ಎಂದರೂ ತಪ್ಪಿಲ್ಲ.
ಏಕೆಂದರೆ, ಇದು ಒಂದು ಔಷಧೀಯ ಗುಣಗಳುಳ್ಳ ಹಣ್ಣಾಗಿದ್ದು, ಅನೇಕ ರೋಗಗಳನ್ನು ಗುಣಪಡಿಸಲು ಸಹಕಾರಿಯಾಗಿದೆ. ಕೇವಲ ಬೇಲದ ಹಣ್ಣು ಮಾತ್ರವಲ್ಲ, ಅದರ ಮರದ ಎಲ್ಲಾ ಭಾಗಗಳನ್ನು ಕೂಡ ಆಯುರ್ವೇದದಲ್ಲಿ ಔಷಧಿಗಾಗಿ ಬಳಸಲಾಗುತ್ತದೆ. ದೇಹವನ್ನು ತಂಪಾಗಿಸಲು ಈ ಹಣ್ಣನ್ನು ಜ್ಯೂಸ್ ಮಾಡಿ ಮಾತ್ರವಲ್ಲ, ಬೆಲ್ಲವನ್ನು ಬೆರೆಸಿಕೊಂಡು ಹಾಗೆಯೇ ತಿನ್ನುತ್ತಾರೆ ಕೂಡ.
ಹಾಗಾದರೆ ಬೇಲದ ಹಣ್ಣಿನಲ್ಲಿ ಆರೋಗ್ಯಕ್ಕೆ ಯಾವ ರೀತಿಯ ಲಾಭಗಳಿವೆ ಬನ್ನಿ ತಿಳಿಯೋಣ.
ಇದನ್ನೂ ಓದಿ: Weight loss: ತೂಕ ಇಳಿಸಲು ಸೂಪರ್ ಅಂಡ್ ಸಿಂಪಲ್ ಮನೆಮದ್ದು
1. ಮಲಬದ್ಧತೆಯ ಸಮಸ್ಯೆಗಳು :
ಬಹಳಷ್ಟು ಮಂದಿಯನ್ನು ಸಾಮಾನ್ಯವಾಗಿ ಕಾಡುವ ಸಮಸ್ಯೆ ಇದು. ಬೇಲದ ಹಣ್ಣಿನಲ್ಲಿ ಅತ್ಯಧಿಕ ಫೈಬರ್ ಇರುತ್ತದೆ ಮತ್ತು ಫೈಬರ್ ಉಳ್ಳ ಆಹಾರಗಳು ಮಲಬದ್ಧತೆಯನ್ನು ನಿವಾರಿಸುತ್ತವೆ. ಹಾಗಾಗಿ, ತೀವ್ರವಾದ ಮಲಬದ್ಧತೆಯ ಸಮಸ್ಯೆ ಇರುವವರು ಬೇಸಿಗೆಯಲ್ಲಿ ಬೇಲದ ಹಣ್ಣಿನ ಜ್ಯೂಸ್ ಕುಡಿಯಬೇಕು ಎಂದು ಶಿಫಾರಸ್ಸು ಮಾಡಲಾಗುತ್ತದೆ.
2. ತೂಕ ಇಳಿಕೆ :
ತೂಕ ಇಳಿಸಿಕೊಳ್ಳಲು ಬಯಸದವರು ಯಾರಿಲ್ಲ ಹೇಳಿ. ಡಯೆಟ್, ವ್ಯಾಯಾಮ ಇತ್ಯಾದಿಗಳ ಮೂಲಕ ಹೇಗಾದರೂ ಬೊಜ್ಜನ್ನು ಕರಗಿಸಿಕೊಳ್ಳಬೇಕು ಎಂದು ಶ್ರಮ ಪಡುವವರು ಅಧಿಕ ಸಂಖ್ಯೆಯಲ್ಲಿದ್ದಾರೆ. ಅಂತವರಿಗೆ ಬೇಲದ ಹಣ್ಣಿನ ಜ್ಯೂಸ್ ಸೂಕ್ತ. ಏಕೆಂದರೆ, ಬೇಲದ ಹಣ್ಣಿನ ಜ್ಯೂಸ್‍ನಲ್ಲಿ 140 ಆರೋಗ್ಯಕರ ಕ್ಯಾಲೋರಿಗಳು ಇವೆ ಮತ್ತು ಬೇಲದ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ನಮ್ಮ ದೇಹದಲ್ಲಿ ಹೆಚ್ಚುವರಿ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಿದೆ ಎಂದು ಪರಿಗಣಿಸಲಾಗಿದೆ.
ಇದನ್ನೂ ಓದಿ: Healthy Lifestyle: ಬೇಸಿಗೆಯಲ್ಲಿ ದೇಹದ ಉಷ್ಣ ಹೆಚ್ಚಾಗದಿರಲು ಈ ಆಹಾರದಿಂದ ದೂರವಿರಿ
3. ಚಯಾಪಚಯವನ್ನು ಹೆಚ್ಚಿಸುತ್ತದೆ :
ಬೇಲದ ಹಣ್ಣಿನ ಜ್ಯೂಸ್‍ನಲ್ಲಿ , ಪ್ರೊಟೀನ್, ಬೇಟಾ- ಕ್ಯಾರೋಟಿನ್ಸ್, ಫೈಬರ್, ರೈಬೋಫ್ಲೇವಿನ್ ಮತ್ತು ವಿಟಮಿನ್ ಸಿ ಇತ್ಯಾದಿ ಪೌಷ್ಟಿಕಾಂಶಗಳಿವೆ. ಈ ಎಲ್ಲಾ ಪೌಷ್ಟಿಕಾಂಶಗಳು ಚಯಾಪಚಯ ದರವನ್ನು ಹೆಚ್ಚಿಸಲು ಕಾರಣವಾಗುತ್ತವೆ.
4. ಕೊಲೆಸ್ಟ್ರಾಲ್ ನಿಯಂತ್ರಿಸಲು ಸಹಾಯ ಮಾಡುತ್ತದೆ :
ಬೇಲದ ಹಣ್ಣಿನ ಜ್ಯೂಸ್, ಲಿಪಿಡ್ ಪ್ರೊಫೈಲ್ ಮತ್ತು ಟ್ರೈಗ್ಲಿಸರೈಡ್‍ಗಳನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿದೆ.
5. ಉರಿಯೂತ ನಿವಾರಕ ಗುಣ ಲಕ್ಷಣಗಳು :
ನಾವು ಮಸಾಲೆಯುಕ್ತ ಆಹಾರಗಳನ್ನು ಸೇವಿಸಿದಾಗ, ಅದರಲ್ಲೂ ಮುಖ್ಯವಾಗಿ ಬೇಸಿಗೆಯಲ್ಲಿ ಆಗಾಗ ಹೊಟ್ಟೆಯಲ್ಲಿ ಆ್ಯಸಿಡ್ ರಿಫ್ಲಕ್ಸ್ ಉಂಟಾಗಬಹುದು. ಆದರೆ, ಬೇಲದ ಹಣ್ಣಿಗೆ ದೇಹವನ್ನು ತಂಪಾಗಿಸುವ ಗುಣವಿದೆ. ಆ ಕಾರಣದಿಂದಾಗಿ ಬೇಲದ ಹಣ್ಣಿನ ಜ್ಯೂಸ್ ಕುಡಿಯುವುದರಿಂದ, ಮಸಾಲೆ ಪದಾರ್ಥಗಳ ಸೇವನೆಯಿಂದ ದೇಹದಲ್ಲಿ ಉಂಟಾಗುವ ಉರಿಯೂತವನ್ನು ನಿವಾರಿಸಲು ಸಹಾಯವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ
link