December 3, 2023
ವಯಸ್ಸಾಗುತ್ತಿದ್ದಂತೆ (Age) ಮನುಷ್ಯ (Human) ಹಲವು ಕಾಯಿಲೆಗೆ (Disease) ತುತ್ತಾಗುತ್ತಾನೆ. ಆದರೆ ಇತ್ತೀಚಿನ ದಿನಗಳಲ್ಲಿ ಹದಿಹರೆಯದವರು ಮತ್ತು ಮಕ್ಕಳಲ್ಲಿಯೂ (Children’s) ಅನೇಕ ಕಾಯಿಲೆಗಳು ಕಂಡು ಬರುತ್ತಿವೆ. ಈಗಿನ ದಿನಗಳಲ್ಲಿ ಆಹಾರ (Food) ಹಾಗೂ ಚಟುವಟಿಕೆ ರಹಿತ ಜೀವನ ಜನರನ್ನು ಸಾಕಷ್ಟು ಆರೋಗ್ಯ ಸಮಸ್ಯೆಗೆ ಗುರಿ ಮಾಡುತ್ತಿದೆ. ಅದರಲ್ಲೂ ವಯಸ್ಸು ನಲವತ್ತು ದಾಟುತ್ತಿದ್ದಂತೆ ಸಮಸ್ಯೆಗಳು ಹೆಚ್ಚುತ್ತಾ ಹೋಗುತ್ತವೆ. ವಯಸ್ಸಾದಂತೆ ದೇಹದಲ್ಲಿ ಪೌಷ್ಟಿಕಾಂಶದ ಕೊರತೆ ಬಹುವಾಗಿ ಕಾಡುತ್ತದೆ. ವಿಶೇಷವಾಗಿ 40 ವರ್ಷ ವಯಸ್ಸಿನ ನಂತರ ಅದರಲ್ಲೂ ಮಹಿಳೆಯರ ದೇಹದಲ್ಲಿ ಅನೇಕ ರೀತಿಯ ಜೀವಸತ್ವಗಳು ಮತ್ತು ಖನಿಜಗಳ ಕೊರತೆ ಉಂಟಾಗಿ ಅನೇಕ ದೈಹಿಕ ಸಮಸ್ಯೆ ಎದುರಿಸುವಂತೆ ಮಾಡುತ್ತದೆ.

ನಲವತ್ತರ ನಂತರದಲ್ಲಿ ಫಿಟ್ನೆಸ್ ಕಾಪಾಡುವುದು

ವೃದ್ಧಾಪ್ಯ ಹಾಗೂ ವಯಸ್ಸು ನಲವತ್ತು ದಾಟುತ್ತಿದ್ದಂತೆ ಫಿಟ್‌ನೆಸ್ ಕಾಪಾಡಿಕೊಳ್ಳಲು ಹರಸಾಹಸ ಪಡಬೇಕಾಗುತ್ತದೆ. ನಲವತ್ತರ ನಂತರ ಫಿಟ್ನೆಸ್ ಕಾಪಾಡಲು ವ್ಯಾಯಾಮ ಮತ್ತು ಉತ್ತಮ ಆಹಾರ ಮಾತ್ರವೇ ಉತ್ತಮ ಮಂತ್ರವಾಗಿದೆ. 40 ವರ್ಷಗಳ ನಂತರ ದೇಹದಲ್ಲಿ ಹಲವು ಬದಲಾವಣೆಗಳು ಕಂಡು ಬರುತ್ತವೆ.

ನಲವತ್ತು ವಯಸ್ಸಿನ ನಂತರ ಮಹಿಳೆಯರ ಹಾರ್ಮೋನ್‌ಗಳಲ್ಲಿ ಬದಲಾವಣೆ ಕಂಡು ಬರುತ್ತದೆ. ಮೆಟಬಾಲಿಸಂ ತುಂಬಾ ನಿಧಾನವಾಗುತ್ತದೆ. ಶಕ್ತಿ ಕುಂದುತ್ತದೆ ಮತ್ತು ಚರ್ಮ ಹಾಗೂ ದೇಹ ಕುಗ್ಗುತ್ತದೆ. ಮತ್ತು ಸಿಹಿ ಆಹಾರ ಸೇವನೆಯ ಕಡು ಬಯಕೆ ಹೆಚ್ಚಾಗುತ್ತದೆ.

ಇದನ್ನೂ ಓದಿ: ಥೈರಾಯ್ಡ್ ರೋಗಿಗಳಿಗೆ ಈ ರೀತಿಯ ಆಹಾರ ಸೇವನೆ ಸೂಕ್ತ! ಮಿಸ್ ಮಾಡಬೇಡಿ

ವಯಸ್ಸು ನಲವತ್ತ ನಂತರ ತೂಕ ಏಕೆ ಹೆಚ್ಚಾಗುತ್ತದೆ?

ವಯಸ್ಸು ನಲವತ್ತು ದಾಟಿದ ನಂತರ ತೂಕ ಹೆಚ್ಚಾಗುತ್ತಾ ಹೋಗುತ್ತದೆ. ಇದಕ್ಕೆ ಮುಖ್ಯ ಕಾರಣ ಅಂದ್ರೆ ಚಯಾಪಚಯ ಪ್ರಕ್ರಿಯೆ ತುಂಬಾ ನಿಧಾನವಾಗುವುದು. ವ್ಯಾಯಾಮದ ಸಮಯದಲ್ಲಿ ಸಹ, 30 ನೇ ವಯಸ್ಸಿನಲ್ಲಿ ನೀವು ಮಾಡಲು ಸಾಧ್ಯವಾಗುವಷ್ಟು ಕ್ಯಾಲೊರಿ ಬರ್ನ್ ಕೂಡ ಮಾಡಲು ಸಾಧ್ಯ ಆಗುವುದಿಲ್ಲ.

ಹಲವು ಬಾರಿ ವ್ಯಾಯಾಮ ಮಾಡಿದ ನಂತರವೂ ಮಹಿಳೆಯರ ಹೊಟ್ಟೆಯ ಮೇಲೆ ಕೊಬ್ಬು ಹೆಚ್ಚುತ್ತದೆ. ಈ ವಯಸ್ಸಿನಲ್ಲಿ ಮಹಿಳೆಯರ ತೂಕ ಕಡಿಮೆಯಾಗದಿರಲು ಋತುಬಂಧವೂ ಪ್ರಮುಖ ಕಾರಣ ಆಗುತ್ತದೆ. ಯಾಕೆಂದರೆ ಈ ವಯಸ್ಸಿನಲ್ಲಿ ಮಹಿಳೆಯರು ಹೈಪರ್ ಥೈರಾಯ್ಡಿಸಮ್ ಸಮಸ್ಯೆಗೆ ಬಲಿಯಾಗುತ್ತಾರೆ. ಇದು ತೂಕ ಕಳೆದುಕೊಳ್ಳಲು ಕಷ್ಟ ಉಂಟು ಮಾಡುತ್ತದೆ.

ವಯಸ್ಸು ನಲವತ್ತರ ನಂತರ ದೈನಂದಿನ ವ್ಯಾಯಾಮ ಎಷ್ಟು ಮುಖ್ಯ

ವಯಸ್ಸು ನಲವತ್ತು ದಾಟುತ್ತಿದ್ದಂತೆ, ಪ್ರತಿದಿನ ಕೇವಲ 30 ನಿಮಿಷ ವ್ಯಾಯಾಮ ಮಾಡುವುದು ನಿಮ್ಮನ್ನು ಆರೋಗ್ಯಕರವಾಗಿರಿಸುತ್ತದೆ. ಇದು ಉತ್ತಮ ಭಾವನೆಯ ಜೊತೆಗೆ ನಿಮ್ಮನ್ನು ಶಕ್ತಿಯುತವಾಗಿರಿಸುತ್ತದೆ.

ವ್ಯಾಯಾಮವು ನಿಮ್ಮ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮತ್ತು ದೇಹದಲ್ಲಿ ನಮ್ಯತೆ ಕಾಪಾಡುತ್ತದೆ. ನಿಯಮಿತ ವ್ಯಾಯಾಮ ಮಾಡುವುದು ನೀವು ದೀರ್ಘಕಾಲ ಯುವಕರಂತೆ ಕಾಣಲು ಸಹಾಯ ಮಾಡುತ್ತದೆ.

ನಲವತ್ತು ವಯಸ್ಸಿನ ನಂತರ ಆಹಾರದ ಬಗ್ಗೆ ಹೆಚ್ಚು ಗಮನ ಕೊಡಿ

ಹೆಚ್ಚುತ್ತಿರುವ ವಯಸ್ಸು ನಿಮ್ಮನ್ನು ಹಲವು ಕಾಯಿಲೆಗೆ ದೂಡುತ್ತದೆ. ಎಷ್ಟೋ ಕಾಯಿಲೆಗಳು ಆಹಾರದಿಂದಲೇ ಹುಟ್ಟಿಕೊಳ್ಳುತ್ತವೆ. ಹಾಗಾಗಿ ನಿಮ್ಮ ಆಹಾರದ ಬಗ್ಗೆ ನೀವು ಹೆಚ್ಚು ಗಮನ ಹರಿಸಬೇಕು. ನೀವು ಬೀಜಗಳು ಮತ್ತು ಬಾದಾಮಿ, ವಾಲ್‌ನಟ್ಸ್, ಕುಂಬಳಕಾಯಿ ಬೀಜಗಳಂತಹ ಬೀಜಗಳನ್ನು ತಿನ್ನಬೇಕು.

ಸೂರ್ಯಕಾಂತಿ ಬೀಜಗಳು ಮತ್ತು ಅಗಸೆ ಬೀಜಗಳನ್ನು ಆಹಾರದಲ್ಲಿ ಸೇರಿಸಬೇಕು. ಆಹಾರದಲ್ಲಿ ಪ್ರೋಟೀನ್ ಪ್ರಮಾಣ ಹೆಚ್ಚುವಂತೆ ಮಾಡಿ. ನಿಯಮಿತ ವ್ಯಾಯಾಮ ಮಾಡಿ. ಆಹಾರದಲ್ಲಿ ಫೈಬರ್ ಭರಿತ ಚಿಯಾ ಬೀಜಗಳು, ಸಬ್ಜಾ ಬೀಜಗಳು ಮತ್ತು ಇಸಾಬ್ಗೋಲ್ ಅನ್ನು ಸೇರಿಸಿ.

ಇದನ್ನೂ ಓದಿ: ಭಾರತದಲ್ಲಿ ಹೆಚ್ಚುತ್ತಿದೆ ಗ್ರೀನ್ ಡೇಟಿಂಗ್ ಟ್ರೆಂಡ್, ಏನಿದು ಹೊಸದು?

ದೇಹದಲ್ಲಿ ಯಾವುದೇ ವಿಟಮಿನ್ ಅಥವಾ ಖನಿಜದ ಕೊರತೆಯಿದ್ದರೆ, ಅದರಲ್ಲಿ ಸಮೃದ್ಧವಾಗಿರುವ ಪೂರಕ ಆಹಾರ ಸೇವನೆ ಮಾಡಿ. ಆರೋಗ್ಯ ಕಾಪಾಡಿಕೊಳ್ಳಿ. ಆಹಾರದಲ್ಲಿ ಕರಿದ ಹಾಗೂ ಜಂಕ್ ಫುಡ್ ಸೇವನೆ ಕಡಿಮೆ ಮಾಡಿ. ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿ ಹಾಗೂ 8 ಗಂಟೆಗಳ ಉತ್ತಮ ನಿದ್ದೆ ಮಾಡಿ.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

link

Leave a Reply

Your email address will not be published. Required fields are marked *